ಶ್ವಾನಗಳ ದಾಳಿಗೆ ಜಿಂಕೆ ಬಲಿ

Deer
Published on

ಚಿಕ್ಕಮಗಳೂರು: ದಾಹ ತಣಿಸಿಕೊಳ್ಳಲು ಗ್ರಾಮಕ್ಕೆ ಬಂದ ಜಿಂಕೆಯೊಂದು ಶ್ವಾನಗಳ ದಾಳಿಗೆ ಸಿಲುಕಿ ಸಾವನ್ನಪ್ಪಿದೆ. ತಾಲೂಕಿನ ಮತ್ತಾವರ ಗ್ರಾಮಕ್ಕೆ ಸಮೀಪದ ಮೀಸಲು ಅರಣ್ಯದಿಂದ ಭಾನುವಾರ ಬೆಳಗ್ಗೆ ಬಂದ ಗಂಡು ಜಿಂಕೆಯ ಮೇಲೆ ಶ್ವಾನಗಳು ಎರಗಿವೆ. ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಅರಣ್ಯ ಇಲಾಖೆ ಅಧಿಕಾರಿ, ಸಿಬ್ಬಂದಿ ಚಿಕಿತ್ಸೆ ನೀಡಿದ್ದಾರೆ. ತೀವ್ರ ಗಾಯಗೊಂಡಿದ್ದರಿಂದ ಚಿಕಿತ್ಸೆಗೆ ಸ್ಪಂದಿಸದೆ ಮಧ್ಯಾಹ್ನ ಅಸು ನೀಗಿದೆ. ಜಿಂಕೆಯ ಮರಣೋತ್ತರ ಪರೀಕ್ಷೆ ಬಳಿಕ ಅಂತ್ಯಕ್ರಿಯೆ ನಡೆಸಲಾಗಿದೆ. ಮೂಡಿಗೆರೆ ಎಸಿಎಫ್ ನಿರ್ಮಲ, ಸಿಬ್ಬಂದಿ ಸತೀಶ್, ರವಿರಾಜ್, ಅಶೋಕ್, ಮಹಮದ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net