ಜಿಂಕೆ ಬೇಟೆಯಾಡಿದ್ದ ಇಬ್ಬರ ಬಂಧನ

11 smg 17
Published on

ಶಿವಮೊಗ್ಗ: ಜಿಂಕೆ ಬೇಟೆಯಾಡಿ ಮಾಂಸ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಅರಣ್ಯ ಇಲಾಖೆ ಸಿಬ್ಬಂದಿ ಬಂಧಿಸಿದ್ದು ಎರಡು ಕೆಜಿ ಮಾಂಸ ಮತ್ತು ಕೊಂಬುಗಳನ್ನು ಜಪ್ತಿ ಮಾಡಿದ್ದಾರೆ.

ಭದ್ರಾವತಿ ತಾಲೂಕಿನ ಹುಣಸೆಕಟ್ಟೆ ಜಂಕ್ಷನ್‌ನ ವೆಂಕಟೇಶ್ ಮತ್ತು ಮಂಜುನಾಥ್ ಬಂಧಿತರು. ಇವರು ಉಂಬ್ಳೆಬೈಲ್ ವಲಯದ ಅರಣ್ಯದಲ್ಲಿ ಜಿಂಕೆ ಬೇಟೆಯಾಡಿ ಹುಣಸೆಕಟ್ಟೆ ಜಂಕ್ಷನ್‌ನಲ್ಲಿರುವ ಮನೆಯಲ್ಲಿ ಮಾಂಸ ಮಾರಾಟ ಮಾಡುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ಬುಧವಾರ ಸಂಜೆ ಉಂಬ್ಳೆಬೈಲ್ ಆರ್‌ಎಫ್‌ಒ ತೇಜ್ ನೇತೃತ್ವದ ತಂಡ ದಾಳಿ ನಡೆಸಿ ಇಬ್ಬರನ್ನು ಬಂಧಿಸಿದೆ.

ಕಾರ್ಯಾಚರಣೆಯಲ್ಲಿ ಡಿಆರ್‌ಎಫ್‌ಒಗಳಾದ ಅಬ್ದುಲ್ ಕರೀಂ, ಗಿಡ್ಡೆಸ್ವಾಮಿ, ಅರಣ್ಯ ರಕ್ಷಕರಾದ ನವೀನ್, ರಾಜಶೇಖರ್, ಸಂತೋಷ, ದಿನೇಶ್, ರಿಯಾಜ್, ಶ್ರೀಕಾಂತ, ಅಲಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net