ವಡಗಟ್ಟಾ ಬಳಿ ನಾಯಿ ದಾಳಿಯಿಂದ ಜಿಂಕೆ ಸಾವು

JINKE SAVU
Published on

ಮುಂಡಗೋಡ: ನಾಯಿಗಳ ದಾಳಿಗೊಳಗಾಗಿ ಗಂಭೀರವಾಗಿ ಗಾಯಗೊಂಡಿದ್ದ ಜಿಂಕೆ ಮೃತಪಟ್ಟ ಘಟನೆ ತಾಲೂಕಿನ ಗಡಿ ಭಾಗದ ವಡಗಟ್ಟಾ ಬಳಿ ಶುಕ್ರವಾರ ನಡೆದಿದೆ.

ಕಾಡಿನಿಂದ ಆಹಾರ ಅರಸುತ್ತ ರಸ್ತೆ ಬಳಿ ಬಂದಿದ್ದ ವೇಳೆ ಜಿಂಕೆ ಮೇಲೆ ನಾಯಿಗಳ ಗುಂಪು ದಾಳಿ ನಡೆಸಿ ಗಂಭೀರವಾಗಿ ಗಾಯಗೊಳಿಸಿವೆ.

ಇದನ್ನು ಗಮನಿಸಿದ ಅರಣ್ಯ ಇಲಾಖೆ ಸಿಬ್ಬಂದಿ ನಾಯಿಗಳ ದಾಳಿಯಿಂದ ಜಿಂಕೆಯನ್ನು ರಕ್ಷಿಸಿದ್ದು, ಜಿಂಕೆ ಕಾಡಿನೊಳಗೆ ಓಡಿ ಹೋಗಿದೆ. ಆಗ ಸಿಬ್ಬಂದಿ ಹಿಂಬಾಲಿಸಿ ಹೋದಾಗ ಜಿಂಕೆ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಮರಣೋತ್ತರ ಪರೀಕ್ಷೆ ಬಳಿಕ ಅರಣ್ಯ ಪ್ರದೇಶದಲ್ಲಿ ಜಿಂಕೆಯ ಅಂತ್ಯ ಸಂಸ್ಕಾರ ನಡೆಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net