ಜಿಂಕೆ, ಕಾಡು ಕೋಣ ಕೊಂಬು ಮಾರಾಟಗಾರನ ಬಂಧನ

web 1
Published on

ಬಾಳೆಹೊನ್ನೂರು: ಹಳೇ ಕಡಬಗೆರೆಯಲ್ಲಿ ಜಿಂಕೆ ಮತ್ತು ಕಾಡು ಕೋಣಗಳ ಕೊಂಬುಗಳನ್ನು ಸಂಗ್ರಹಿಸಿದ ಓರ್ವನನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ. ಆರೋಪಿಯಿಂದ ಜಿಂಕೆ 19 ಕೊಂಬುಗಳು, ಕಾಡುಕೋಣದ 4 ಕೊಂಬುಗಳು ಹಾಗೂ ಒಂದು ಬೈಕ್ ವಶಪಡಿಸಿಕೊಂಡಿದ್ದಾರೆ.

ಹಳೇ ಕಡಬಗೆರೆಯ ಅನಿಲ್ ಥಾಮಸ್ ಅಂತೋಣಿ ಬಂಧಿತ ಆರೋಪಿ. ಮತ್ತೋರ್ವ ಬಾಳೆಗದ್ದೆಯ ಸಂದೇಶ್ ಪರಾರಿಯಾಗಿದ್ದಾನೆ. ಡಿಎಫ್​ಒ ತಾಕತ್ ಸಿಂಗ್ ಹಾಗೂ ಎಸಿಎಫ್ ಸತೀಶ್ ಮಾರ್ಗದರ್ಶನದಲ್ಲಿ ಆರ್​ಎಫ್​ಒ ನಿರಂಜನ್, ಹೆಬ್ಬೆ ವಲಯದ ಆರ್​ಎಫ್​ಒ ಕಿರಣ್, ಐಎಫ್​ಎಸ್ ಪ್ರೊಬೇಷನರಿ ಅಧಿಕಾರಿ ಸಂದೀಪ್ ಸೂರ್ಯವಂಶಿ, ವಿಶೇಷ ಸಂಚಾರಿದಳದ ಸೌಮ್ಯಾ ಮಂಜುನಾಥ್, ತ್ಯಾವರೆ ನಾಯ್್ಕ ಸಂಪ್ರೀತ್, ಸಂತೋಷ್ ಜೋಗಿ, ಎನ್.ಎಸ್.ಸಂಜಯ್, ವಾಹನ ಚಾಲಕ ಪ್ರಕಾಶ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net