ವೇಮಗಲ್​ನಲ್ಲಿ ದೀಪೋತ್ಸವ ಅದ್ದೂರಿ

FotoJet (1)
Published on

ತಂಬಿಟ್ಟಿನ ಆರತಿ ಬೆಳಗಿ ಇಷ್ಟಾರ್ಥ ಸಿದ್ಧಿಗೆ ಪ್ರಾರ್ಥನೆ

ವೇಮಗಲ್​ : ಕೋಲಾರ ತಾಲೂಕು ವೇಮಗಲ್​ನಲ್ಲಿ 50ನೇ ವರ್ಷದ ಕರಗದ ಸುವರ್ಣ ಮಹೋತ್ಸವದ ಪ್ರಯುಕ್ತ ಮಂಗಳವಾರ ಅದ್ದೂರಿ ದೀಪೋತ್ಸವ ನೆರವೇರಿಸಲಾಯಿತು.

ತಂಬಿಟ್ಟಿನ ದೀಪಾರತಿ ನೆರವೇರಿಸಿ ಇಷ್ಟಾರ್ಥಗಳ ಸಿದ್ಧಿಗೆ ಭಕ್ತರು ಪ್ರಾರ್ಥಿಸಿದರು. ಪುರಾಣದ ಪ್ರಕಾರ ದ್ರೌಪದಿ ದೇವಿಯೂ ಲಕ್ಷಿ$್ಮ, -ಸರಸ್ವತಿ, ದುರ್ಗೆಯರ ರೂಪದೊಂದಿಗೆ ದೀಪದಲ್ಲಿ ನೆಲೆಸಿರುತ್ತಾರೆ. ನಾವು ನಮ್ಮ ದು@ಖವನ್ನು ಹೋಗಲಾಡಿಸಿ ಸಂತೋಷ ಬರಮಾಡಿಕೊಳ್ಳುವುದೇ ದೀಪೋತ್ಸವದ ತತ್ವ. ಹಾಗಾಗಿ ಜನಾಂಗದ ಬಾಂಧವರು ಕರಗ ಉತ್ಸವಗಳಲ್ಲಿ ದೀಪೋತ್ಸವವನ್ನು ಪ್ರಮುಖವಾಗಿ ಆಚರಿಸುತ್ತಾರೆ. ವಾರ್ಷಿಕವಾಗಿ ಮನೆದೇವರಿಗೆ ಮತ್ತು ಊರಬ್ಬಗಳಂದು ಗ್ರಾಮದೇವತೆಗಳಿಗೂ ವೈಭವದ ದೀಪೋತ್ಸವ ಆಚರಣೆಯಲ್ಲಿದೆ. ಇದರಿಂದ ದೇವತೆಗಳು ಸಂತೃಪ್ತರಾಗಿ ನಮ್ಮನ್ನು ಕಾಯುತ್ತಾರೆಂಬ ಐತಿಹ್ಯವೂ ಇದೆ. ಈ ವರ್ಷ ವಿಶೇಷವಾಗಿ ದೀಪಾರತಿಗಳನ್ನು ಹೊತ್ತು ತಂದಿದ್ದ ಮಹಿಳೆಯರನ್ನು ಕೇರಳದ ಚಂಡೆ ವಾದ್ಯಗಳೊಂದಿಗೆ ಮೆರವಣಿಗೆಯ ಮೂಲಕ ಪಟ್ಟಣ ಕೋದಂಡರಾಮಸ್ವಾಮಿ ದೇವಾಲಯಕ್ಕೆ ಸ್ವಾಗತಿಸಲಾಯಿತು.

ರಾತ್ರಿ ಶ್ರೀ ದ್ರೌಪದಮ್ಮ ಶ್ರೀ ಧರ್ಮರಾಯಸ್ವಾಮಿ ದೇವಾಲಯಕ್ಕೆ ತೆರಳಿ ಆರತಿ ದೀಪಗಳನ್ನು ಬೆಳಗಲಾಯಿತು.

ದ್ರೌಪದಮ್ಮ ಧರ್ಮರಾಯ ಸ್ವಾಮಿ ದೇವಾಲಯ ಸೇವಾ ಅಭಿವೃದ್ಧಿ ಟ್ರಸ್ಟ್​ನ ಎಲ್ಲ ಪದಾಧಿಕಾರಿಗಳು, ವೀರ ಕುಮಾರ ಮಕ್ಕಳು, ಯುವಕರು ಎಲ್ಲ ಜನಾಂಗದ ಮುಖಂಡರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net