ಶ್ರೀಉಗ್ರ ನರಸಿಂಹಸ್ವಾಮಿ ದೇಗುಲದಲ್ಲಿ ದೀಪೋತ್ಸವ

16M.D.R.1
ಮದ್ದೂರಿನ ಪುರಾಣ ಪ್ರಸಿದ್ಧ ಶ್ರೀ ಉಗ್ರ ನರಸಿಂಹಸ್ವಾಮಿ ದೇಗುಲದಲ್ಲಿ ಶ್ರೀ ವಿಷ್ಣು ದೀಪೋತ್ಸವ ಭಾನುವಾರ ರಾತ್ರಿ ಅದ್ದೂರಿಯಾಗಿ ನಡೆಯಿತು. ಭಕ್ತಾದಿಗಳು ಭಾಗವಹಿಸಿದ್ದರು.
Published on

ಮದ್ದೂರು: ಪಟ್ಟಣದ ಪುರಾಣ ಪ್ರಸಿದ್ಧ ಶ್ರೀ ಉಗ್ರ ನರಸಿಂಹಸ್ವಾಮಿ ದೇಗುಲದಲ್ಲಿ ಶ್ರೀವಿಷ್ಣು ದೀಪೋತ್ಸವ ಭಾನುವಾರ ರಾತ್ರಿ ಅದ್ದೂರಿಯಾಗಿ ನಡೆಯಿತು. ದೀಪೋತ್ಸವದ ಅಂಗವಾಗಿ ದೇಗುಲದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.

ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. ಆಗಮಿಸಿದ ಭಕ್ತಾದಿಗಳಿಗೆ ತೀರ್ಥ, ಪ್ರಸಾದ ವಿತರಣೆ ಮಾಡಲಾಯಿತು.

ವಿಷ್ಣುವಿನ ಪ್ರಿಯವಾದ ಮಾರ್ಗಶಿರ ಮಾಸದ ಹುಣ್ಣಿಮೆಯಲ್ಲಿ ಎಲ್ಲ ವಿಷ್ಣು ದೇವಾಲಯದಲ್ಲಿ ನೆರವೇರುವಂತೆ ಇಲ್ಲಿಯೂ ದೇವರಿಗೆ ವಿಶೇಷವಾಗಿ ಭಕ್ತಾದಿಗಳಿಂದ 11 ದೀಪ ಸಂಕಲ್ಪ ಸೇವೆ, ದೀಪೋತ್ಸವ ಸೇವೆ, ದೇವರ ಉತ್ಸವ, ಆರತಿ, ಪ್ರಸಾದ ವಿನಿಯೋಗ ನೆರವೇರಿದವು.

ಡಿ.17 ರಿಂದ 1 ತಿಂಗಳು ಧನುರ್ಮಾಸ ಪ್ರಾರಂಭವಾಗಲಿದ್ದು. ಈ ತಿಂಗಳು ದೇವರಿಗೆ ಬ್ರಾಹ್ಮಿ ಮುಹೂರ್ತದಲ್ಲಿ ಮಾತ್ರ ಪೂಜೆ ನಡೆಯಲಿದ್ದು, ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಪ್ರಮುಖ ಪೂಜಾ ಕಾರ್ಯಗಳು ದೇವರಿಗೆ ನಡೆಯುವುದಿಲ್ಲ. ಈ ಸಮಯದಲ್ಲಿ ದೇವರು ಏಕಾಂತದಲ್ಲಿ ಇರುವ ಸಮಯವೆಂದು ವೈಷ್ಣವ ಪಂಥದ ನಂಬಿಕೆಯಾಗಿದೆ ಎಂದು ದೇವಾಲಯದ ಪ್ರಧಾನ ಅರ್ಚಕರಾದ ನಾರಾಯಣಸ್ವಾಮಿ ತಿಳಿಸಿದರು. ಶ್ರೀ ಅರ್ಜುನಪುರಿ ಸ್ವ-ಸೇವಾ ಸಂಘದ ಪದಾಧಿಕಾರಿಗಳು ಧಾರ್ಮಿಕ ಕಾರ್ಯಗಳ ಸೇವೆ ಸಲ್ಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net