ಅ.೨೧ರಂದು ದೀಪೋತ್ಸವ ಕಾರ್ಯಕ್ರಮ

rajeshwari temple
Published on

ಮಡಿಕೇರಿ: ದೀಪಾವಳಿ ಪ್ರಯುಕ್ತ ರಾಜರಾಜೇಶ್ವರಿ ದೇವಾಲಯದಲ್ಲಿ ಅ.೨೧ರಂದು ದೀಪೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ದೇವಾಲಯದ ಧರ್ಮದರ್ಶಿ ಗೋವಿಂದಸ್ವಾಮಿ ಮನವಿ ಮಾಡಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ರಾತ್ರಿ ೭ ಗಂಟೆಗೆ ಕಳಸ ಪೂಜೆ ನಡೆಯಲಿದೆ. ನಂತರ ೮ ಗಂಟೆಗೆ ಅನ್ನದಾನ, ೯ ಗಂಟೆಗೆ ತಾಯಿಯ ದರ್ಶನವಾಗಲಿದೆ. ೯.೩೦ ಗಂಟೆಗೆ ದೀಪೋತ್ಸವ ಆರಂಭವಾಗಲಿದೆ. ದೋಷ ಮತ್ತು ಸಂಕಷ್ಟ ಪರಿಹಾರಕ್ಕಾಗಿ ದೀಪೋತ್ಸವದಲ್ಲಿ ೧೦೮ ಎಳ್ಳುಬತ್ತಿಯನ್ನು ಹಚ್ಚಲಾಗುತ್ತದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ದೇವಾಲಯ ಸಮಿತಿ ಟ್ರಸ್ಟಿಗಳಾದ ಸಚ್ಚಿನ್ ವಾಸುದೇವ್, ಕಿರಣ್, ಭಕ್ತರಾದ ಹರೀಶ್, ಚುಮ್ಮಿದೇವಯ್ಯ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net