ವಿದ್ಯಾದಾನದ ಪುಣ್ಯದಿಂದ ಉನ್ನತ ಸಾಧನೆ : ಏರ್ಯ ಬಾಲಕೃಷ್ಣ ಹೆಗ್ಡೆ ಪ್ರತಿಪಾದನೆ

New Project (36)
Published on

ಬಂಟ್ವಾಳ: ವಿದ್ಯಾದಾನಕ್ಕಿಂತ ದೊಡ್ಡ ದಾನವಿಲ್ಲ. ವಿದ್ಯಾದಾನ ಮಾಡಿದ ವ್ಯಕ್ತಿ ಎತ್ತರಕ್ಕೆ ಏರಲು ಸಾಧ್ಯವಿದೆ ಎಂದು ಬೆಂಗಳೂರಿನ ಚಾರ್ಟೆಡ್ ಹೌಸಿಂಗ್ ಚೇರ‌್ಮನ್ ಏರ್ಯ ಬಾಲಕೃಷ್ಣ ಹೆಗ್ಡೆ ಹೇಳಿದರು.

ಬಿ.ಸಿ.ರೋಡ್ ಮೊಡಂಕಾಪು ದೀಪಿಕಾ ಪ್ರೌಢಶಾಲೆಯ ವಜ್ರ ಮಹೋತ್ಸವ ಸಂಭ್ರಮದ ಅಂಗವಾಗಿ ಭಾನುವಾರ ಸಂಜೆ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಹಳೇ ವಿದ್ಯಾರ್ಥಿ ಮಾಜಿ ಸಚಿವ ಬಿ.ರಮಾನಾಥ ರೈ ವಜ್ರದೀಪಿಕಾ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿ ಮಾತನಾಡಿ, ಸಾರ್ಥಕ ಸೇವೆಯನ್ನು ದೀಪಿಕಾ ವಿದ್ಯಾಸಂಸ್ಥೆ ನೀಡಿದೆ. ಸರ್ವಜನಾಂಗದ ವಿದ್ಯಾರ್ಥಿಗಳು ಇಲ್ಲಿ ಸಮಪ್ರಮಾಣದಲ್ಲಿದ್ದಾರೆ. ಇದೊಂದು ದೇಶದಲ್ಲೇ ಮಾದರಿ ಶಾಲೆ ಎಂದರು.

ದೀಪಿಕಾ ಪ್ರೌಢಶಾಲೆಯ ವಜ್ರಮಹೋತ್ಸವ ಸಮಿತಿ ಅಧ್ಯಕ್ಷ ರಾಕೇಶ್ ಮಲ್ಲಿ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಶಿಕ್ಷಕ ಆಂಡ್ರೂೃ ವಿಲಿಯಂ ಪಿಂಟೋ, ಸೀತಾರಾಮ ಭಟ್, ಮಹಾಬಲೇಶ್ವರ ಹೆಬ್ಬಾರ್, ಎಫ್.ಜೆ.ವಾಸ್, ಎಚ್.ಎಂ.ಹೆಬ್ಬಾರ್, ಬಾಬುಗೌಡ, ನಾರಾಯಣ ಹೆಬ್ಬಾರ್, ಮೋಹನ್‌ದಾಸ್ ಭಟ್, ಪ್ಲೇವಿ ಕ್ರಾಸ್ತ , ದಾಮೋದರ್, ಖಾದ್ರಿ, ಏರ್ಯ ಆನಂದಿ ಆಳ್ವ, ಹಳೇ ವಿದ್ಯಾರ್ಥಿ, ಫಾದರ್ ಮುಲ್ಲರ್ ಚಾರಿಟೆಬಲ್ ಆಸ್ಪತ್ರೆಯ ನಿಯೋಜಿತ ನಿರ್ದೇಶಕ ಫಾವೋಸ್ತಿನ್ ಲೋಬೋ, ದೀಪಿಕಾ ಪ್ರೌಢಶಾಲೆಯ ಸಂಚಾಲಕ ವೆಲೇರಿಯನ್ ಡಿಸೋಜ, ವಕೀಲ ಅಶ್ವನಿ ಕುಮಾರ್ ರೈ, ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಾಜೇಶ್ ಸಾಲ್ಯಾನ್, ಮುಖ್ಯಶಿಕ್ಷಕ ಸಾಧು ಉಪಸ್ಥಿತರಿದ್ದರು.

ಹಳೇ ವಿದ್ಯಾರ್ಥಿ ಸತೀಶ್ ಭಂಡಾರಿ ಸ್ವಾಗತಿಸಿದರು. ನಿವೃತ್ತ ಮುಖ್ಯಶಿಕ್ಷಕ ಮಹಾಬಲೇಶ್ವರ ಹೆಬ್ಬಾರ್ ಪ್ರಾಸ್ತಾವಿಕ ಮಾತನಾಡಿದರು. ಮಹಮ್ಮದ್ ವಳವೂರು, ಶಿವಪ್ರಸಾದ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ವಜ್ರಮಹೋತ್ಸವ ಆಚರಣೆ ಸಂತೋಷದ ವಿಚಾರ. ಈ ಶಾಲೆಗೆ ಬೇಕಾದ ಅಗತ್ಯಗಳನ್ನು ಹಳೇ ವಿದ್ಯಾರ್ಥಿಗಳು, ಸರ್ಕಾರದಿಂದ ಪಡೆಯಲು ನಾವೆಲ್ಲರೂ ಜತೆಯಾಗಿ ಪ್ರಯತ್ನಿಸೋಣ. ಕ್ರೀಡೆಗೆ ಹೆಚ್ಚಿನ ಒತ್ತು ನೀಡಿ ಕ್ರೀಡಾಕ್ಷೇತ್ರದಲ್ಲೂ ವಿದ್ಯಾರ್ಥಿಗಳು ಹೆಚ್ಚಿನ ಸಾಧನೆ ಮಾಡಲು ಪ್ರೇರೇಪಿಸೋಣ. ರಾಕೇಶ್ ಮಲ್ಲಿ ವಜ್ರಮಹೋತ್ಸವ ಸಮಿತಿ ಅಧ್ಯಕ್ಷ https://www.vijayavani.net/kukke-belli-pallakki https://www.vijayavani.net/dharamsthal-yojana-monthly-meeting-at-kadaba

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net