ಪ್ರಯತ್ನ, ಛಲವಿದ್ದರೆ ಸಾಧನೆ ಸಾಧ್ಯ :ರೈಮಂಡ್ ಡಿಸೋಜ ಅಭಿಮತ

New Project (17)
Published on

ಬಂಟ್ವಾಳ: ಜೀವನದಲ್ಲಿ ಯಾವುದೇ ಕ್ಷೇತ್ರದಲ್ಲಿ ಸಾಧನೆ ಮಾಡಬೇಕಾದರೆ ಪ್ರಯತ್ನ ಹಾಗೂ ಛಲ ಅತಿ ಅಗತ್ಯವಾಗಿದ್ದು, ನಾವು ಕಲಿತ ಶಾಲೆಯೂ ಸಾಧನೆಗೆ ದೊಡ್ಡ ಶಕ್ತಿ. ನನ್ನ ಜೀವನದ ಶಿಸ್ತು, ಕ್ರೀಡಾ ಸಾಧನೆಗೆ ಮೊಡಂಕಾಪು ದೀಪಿಕಾ ಪ್ರೌಢಶಾಲೆಯ ಕೊಡುಗೆ ವಿಶೇಷವಾಗಿದೆ ಎಂದು ಮಿಸ್ಟರ್ ವರ್ಲ್ಡ್ ಪುರಸ್ಕೃತ ಅಂತಾರಾಷ್ಟ್ರೀಯ ದೇಹದಾರ್ಢ್ಯಪಟು ರೈಮಂಡ್ ಡಿಸೋಜ ಹೇಳಿದರು.

ಬಿ.ಸಿ.ರೋಡಿನ ಮೊಡಂಕಾಪು ದೀಪಿಕಾ ಪ್ರೌಢಶಾಲೆಯ ವಜ್ರ ಮಹೋತ್ಸವ ಸಂಭ್ರಮದ ಭಾಗವಾಗಿ ಶನಿವಾರ ನಡೆದ ಶಾಲಾ ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿದರು.

ಮೊಡಂಕಾಪು ವಿದ್ಯಾಭಿವೃದ್ಧಿ ಸಮಿತಿ ಅಧ್ಯಕ್ಷ ವೆಲೇರಿಯನ್ ಡಿಸೋಜ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂಸ್ಥೆ ಹುಟ್ಟು ಹಾಕಿದ ವಿದ್ಯಾಭಿವೃದ್ಧಿ ಸಮಿತಿಯ ಪ್ರಾರಂಭಿಕ ಪದಾಧಿಕಾರಿಗಳಾದ ಕ್ಯಾಸ್ತಲಿನೊ, ಡಾ.ಏರ್ಯ ಲಕ್ಷ್ಮೀನಾರಾಯಣ ಆಳ್ವ ಸೇರಿದಂತೆ ಎಲ್ಲರಿಗೂ ನಮನಗಳನ್ನು ಸಲ್ಲಿಸುತ್ತೇನೆ. ಮೌಲ್ಯಾಧಾರಿತ ಶಿಕ್ಷಣದ ಮೂಲಕ ಸಂಸ್ಥೆಯು ಬಂಟ್ವಾಳ ಪರಿಸರದ ಎಲ್ಲರಿಗೂ ಸ್ವಾಭಿಮಾನದ ಜೀವನ ನೀಡಿದೆ ಎಂದರು.

ಶಿಕ್ಷಣ ಪ್ರೇಮಿ ಮೌಲನಾ ಅಬ್ದುಲ್ ಅಝೀಝ್ ದಾರಿಮಿ, ಅನಿವಾಸಿ ಭಾರತೀಯ ಉದ್ಯಮಿ ರವಿ ಶೆಟ್ಟಿ ಮೂಡಂಬೈಲು ಕತ್ತಾರ್, ಮಕ್ಕಳ ತಜ್ಞ ಡಾ.ಮಹೇಶ್ ಭಟ್, ವಿದ್ಯಾಭಿವೃದ್ಧಿ ಸಮಿತಿ ಕಾರ್ಯದರ್ಶಿ ರಿಚ್ಚಾರ್ಡ್ ಮೊಂತೇರೊ, ಟ್ರಸ್ಟಿ ಅಶ್ವನಿಕುಮಾರ್ ರೈ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಾಜೇಶ್ ಸಾಲ್ಯಾನ್, ವಿದ್ಯಾರ್ಥಿ ನಾಯಕ ಅಯಾಝ್ ಅಹಮದ್ ಉಪಸ್ಥಿತರಿದ್ದರು.

ವಜ್ರ ಮಹೋತ್ಸವ ಸಮಿತಿ ಅಧ್ಯಕ್ಷ ರಾಕೇಶ್ ಮಲ್ಲಿ ಹಾಗೂ ಪದಾಧಿಕಾರಿಗಳು, ಹಳೇ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು ಪಾಲ್ಗೊಂಡಿದ್ದರು. ಉದ್ಯಮಿ ಜೇಸನ್ ಸಂತೋಷ್ ಮೊಂತೇರೊ ಧ್ವಜಾರೋಹಣ ನೆರವೇರಿಸಿದರು. ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುನಾಥನ್ ಎಂ.ಜಿ. ಶುಭಹಾರೈಸಿದರು.

ಮುಖ್ಯಶಿಕ್ಷಕ ಸಾಧು ವರದಿ ವಾಚಿಸಿದರು.ಶಿಕ್ಷಕಿಯರಾದ ಪ್ರಪುಲ್ಲಾ ಸಲ್ಡಾನಾ ಸ್ವಾಗತಿಸಿದರು. ವೀರ ಎಮಿಲಿಯಾ ಡಿಸೋಜ ವಂದಿಸಿದರು. ಶಿಕ್ಷಕ ತಿಪ್ಪೇಸ್ವಾಮಿ ಕಾರ್ಯಕ್ರಮ ನಿರ್ವಹಿಸಿದರು.

ಸನ್ಮಾನ, ಬಹುಮಾನ

ಶಾಲೆಯ ನಿವೃತ್ತ ಸಿಬಂದಿ, ಅಡುಗೆ ಸಿಬಂದಿ, ಎಸ್ಸೆಸ್ಸೆಲ್ಸಿ ಸಾಧಕ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಸ್ಪರ್ಧಾ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

ಶೈಕ್ಷಣಿಕ ಕ್ಷೇತ್ರದಲ್ಲಿ ದೀಪಿಕಾ ಶಾಲೆ ವಿಶೇಷ ಸಾಧನೆ ಮಾಡಿದ್ದು, ಈ ಕನ್ನಡ ಶಾಲೆಯ ಉಳಿವಿನ ದೃಷ್ಟಿಯಿಂದ ಹಳೇ ವಿದ್ಯಾರ್ಥಿಗಳು ಬಹಳ ಉತ್ಸುಕತೆ ತೋರಿರುವುದು ಶ್ಲಾಘನೀಯವಾಗಿದೆ. ಇಲ್ಲಿನ ವಿದ್ಯಾರ್ಥಿಗಳು ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡುವ ಮೂಲಕ ಶಾಲೆಗೆ ದೊಡ್ಡ ಹೆಸರು ತಂದುಕೊಡುವಂತಾಗಲಿ. ರೈಮಂಡ್ ಡಿಸೋಜ, ಅಂತಾರಾಷ್ಟ್ರೀಯ ದೇಹದಾರ್ಢ್ಯಪಟು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net