ದೀಪಾವಳಿ ಪ್ರಯುಕ್ತ ಗೋಪೂಜೆ

27raju2
Published on

ಚಾಮರಾಜನಗರ: ದೈವ ಸ್ವರೂಪಿಯಾದ ಗೋ ಮಾತೆಯನ್ನು ಪೂಜಿಸುವುದು ಒಳ್ಳೆಯ ಕಾರ್ಯ ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶೆ ಭಾರತಿ ಹೇಳಿದರು.


ನಗರದ ಜನಾರ್ದನ ಪ್ರತಿಷ್ಠಾನದ ವತಿಯಿಂದ ಹರಳುಕೋಟೆ ಶ್ರೀಜನಾರ್ದನಸ್ವಾಮಿ ದೇವಸ್ಥಾನ ಆವರಣದಲ್ಲಿ ದೀಪಾವಳಿಯ ಬಲಿಪಾಡ್ಯಮಿ ಅಂಗವಾಗಿ ಬುಧವಾರ ಆಯೋಜಿಸಿದ್ದ ಗೋ ಪೂಜೆ ಕಾರ್ಯಕ್ರಮದಲ್ಲಿ ಹಸುವಿಗೆ ಪೂಜೆ ನೆರವೇರಿಸಿ ಮಾತನಾಡಿದರು.


ದೀಪಾವಳಿ ಎಂದರೆ ಗೋ ಪೂಜೆ. ನಿತ್ಯ ನಮ್ಮ ಕಣ್ಣಿಗೆ ಕಾಣುವ ದೇವರೆಂದರೆ ಹಸು. ಹಸುವಿನಿಂದ ಮನುಷ್ಯನಿಗೆ ಅನೇಕ ಪ್ರಯೋಜನಗಳಿವೆ. ನಿತ್ಯವೂ ಈ ಗೋಮಾತೆಯ ಆರಾಧನೆ ಮಾಡಿದರೆ ನಮ್ಮ ಪಾಪ ಕರ್ಮಗಳು ನಾಶವಾಗಿ, ಪುಣ್ಯ ಪ್ರಾಪ್ತಿಯಾಗುತ್ತದೆ ಎಂದು ಪುರಾಣಗಳು ಹೇಳುವುದರಿಂದ ದೈವಸ್ವರೂಪಿಯಾದ ಗೋ ಮಾತೆಯನ್ನು ಪೂಜಿಸುವುದು ಒಳ್ಳೆಯ ಕಾರ್ಯ ಎಂದರು. ಬರಹಗಾರ ಲಕ್ಷ್ಮೀನರಸಿಂಹ ಮಾತನಾಡಿದರು. ಪ್ರತಿಷ್ಠಾನದ ಅಧ್ಯಕ್ಷ ಅರ್ಚಕ ಅನಂತಪ್ರಸಾದ್, ದಲಿತ ಮುಖಂಡ ವೆಂಕಟರಮಣಸ್ವಾಮಿ (ಪಾಪು), ಕಂದಾಯ ಇಲಾಖೆಯ ರಂಗರಾಜು, ಅಂಗಡಿ ರಮೇಶ್, ನರಸಿಹ, ನವೀನ್‌ಭಟ್, ಚೈತ್ರಾ ದಂಪತಿ, ಮಂಜು ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net