

ಉಳ್ಳಾಲ: ಇಂದಿನ ಆಧುನಿಕತೆಯಲ್ಲಿ ದೀಪಾವಳಿಯಂಥ ಹಬ್ಬಗಳನ್ನು ಪಾರಂಪರಿಕವಾಗಿ ಆಚರಿಸಿಕೊಂಡು ಬಂದ ರೀತಿಯನ್ನು ನಾವು ಮರೆಯದೆ ಅದರ ಮಹತ್ವ ಇಂದಿನ ಮಕ್ಕಳಿಗೂ ತಿಳಿಸುವ ಕಾರ್ಯ ಆಗಬೇಕಿದೆ. ಗ್ರಾಮೀಣ ಭಾಗದ ಕೃಷಿ ಸಂಸ್ಕೃತಿಯೊಂದಿಗೆ ಬೆಸೆದುಕೊಂಡ ದೀಪಾವಳಿ ಎಂಬ ಬೆಳಕಿನ ಹಬ್ಬ ನಮ್ಮ ಮನೆ-ಮನದ ಜತೆ ಇಡೀ ಸಮಾಜ ಹಾಗೂ ಜಗತ್ತನ್ನೇ ಬೆಳಗಲಿ ಎಂದು ಉಪನ್ಯಾಸಕ ಡಾ.ಅರುಣ್ ಉಳ್ಳಾಲ್ ಹೇಳಿದರು.
ಗ್ರಾಮಚಾವಡಿ-ಕೊಣಾಜೆ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘದ ಆಶ್ರಯದಲ್ಲಿ ಕೊಣಾಜೆ ಘಟಕ, ಯುವ ಘಟಕ ಹಾಗೂ ಮಹಿಳಾ ಘಟಕದ ವತಿಯಿಂದ ಪರಂಡೆಯ ಯುಬಿಎಂಸಿ ಶಾಲೆಯಲ್ಲಿ ಗೂಡುದೀಪ ಸಂಗಮ, ದೀಪಾವಳಿ ಸಂಭ್ರಮ-2025 ಕಾರ್ಯಕ್ರಮದಲ್ಲಿ ಮಾತನಾಡಿದರು.
ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘ ಅಧ್ಯಕ್ಷ ವಿಜೇತ್ ಪಜೀರು ಉದ್ಘಾಟಿಸಿದರು. ಕೊಣಾಜೆ ಗ್ರಾಮ ಸಮಿತಿ ಅಧ್ಯಕ್ಷ ಗಣೇಶ್ ಅಮೀನ್ ಮುಟ್ಟಿಂಜ ಅಧ್ಯಕ್ಷತೆ ವಹಿಸಿದ್ದರು. ಕೊಣಾಜೆ ಗ್ರಾಪಂ ಅಧ್ಯಕ್ಷೆ ಗೀತಾ ಡಿ.ಕುಂದರ್, ಬ್ರಹ್ಮಶ್ರೀ ನಾರಾಯಣ ಗುರು ಮಹಿಳಾ ಘಟಕ ಅಧ್ಯಕ್ಷೆ ಬಬಿತಾ ಯಾದವ ಪೂಜಾರಿ, ಯುಬಿಎಂಸಿ ಶಾಲೆ ಸಂಚಾಲಕ ಎಡ್ವರ್ಡ್ ಜೆ.ಐಮನ್, ಕೊಣಾಜೆ ಪಂಚಾಯಿತಿ ಉಪಾಧ್ಯಕ್ಷ ಹರಿಶ್ಚಂದ್ರ ಸೆಟ್ಟಿಗಾರ್, ಮುಡಿಪು ಲಯನ್ಸ್ ಕ್ಲಬ್ ಅಧ್ಯಕ್ಷ ಅಜಿತ್ ಪೂಜಾರಿ, ಯುವವಾಹಿನಿ ಘಟಕದ ಅಧ್ಯಕ್ಷ ಬಾಬು ಬಂಗೇರ ಮುಟ್ಟಿಂಜ, ಯುವ ಘಟಕದ ಅಧ್ಯಕ್ಷ ಅಜಿತ್ ಕುಮಾರ್, ಮಹಿಳಾ ಘಟಕ ಅಧ್ಯಕ್ಷೆ ಸರಿತಾ ಆರ್.ಬಂಗೇರ, ಮುಖಂಡ ಮುರಳೀಧರ ಕೊಣಾಜೆ ಉಪಸ್ಥಿತರಿದ್ದರು.
ಸುರೇಖಾ ಎಚ್.ಪೂಜಾರಿ ಸ್ವಾಗತಿಸಿ. ಅಜಿತ್ ಕುಮಾರ್ ತಾರಿಪಾಡಿ ವಂದಿಸಿ, ರವೀಂದ್ರ ಬಂಗೇರ, ಹರ್ಷಿತಾ, ಸುಶ್ಮಿತಾ ನಿರೂಪಿಸಿದರು.