ದೀಪ ಸಂಜೀವಿನಿ ವಸ್ತು ಪ್ರದರ್ಶನ, ಮಾರಾಟ ಮೇಳಕ್ಕೆ ಚಾಲನೆ

9 Dwd 9
Published on

ಧಾರವಾಡ: ದೀಪಾವಳಿ ಹಬ್ಬದ ಪ್ರಯುಕ್ತ ಮಹಿಳೆಯರ ಸ್ವ ಸಹಾಯ ಸಂಘಗಳ ಅಭಿವೃದ್ಧಿಗಾಗಿ ಗ್ರಾಮೀಣ ಅಭಿವದ್ಧಿ ಪಂಚಾಯತ್ ರಾಜ್ ಇಲಾಖೆ, ಕೌಶಲ್ಯ ಅಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಜಿಲ್ಲಾ ಪಂಚಾಯಿತಿ, ಸಂಜೀವಿನಿ ಜಿಲ್ಲಾ ಅಭಿಯಾನ ನಿರ್ವಹಣಾ ಘಟಕಗಳ ಆಶ್ರಯದಲ್ಲಿ ದೀಪ ಸಂಜೀವಿನಿ ವಸ್ತು ಪ್ರದರ್ಶನ ಹಾಗೂ ಮಾರಾಟ ಮೇಳಕ್ಕೆ ಜಿ.ಪಂ. ಸಿಇಒ ಸ್ವರೂಪ ಟಿ.ಕೆ ಗುರುವಾರ ಚಾನೆ ನೀಡಿದರು.
ವಿವಿಧ ಸ್ವ ಸಹಾಯ ಗುಂಪುಗಳ ಮಳಿಗೆಗಳಿಗೆ ಭೇಟಿ ನೀಡಿ ಉಸ್ತುವಾರಿ ಮಹಿಳೆಯರನ್ನು ಮಾತನಾಡಿಸಿ ಉದ್ಯೋಗ ಹಾಗೂ ಆರ್ಥಿಕ ಅನುಕೂಲತೆಗಳ ಬಗ್ಗೆ ವಿಚಾರಿಸಿದರು. ಉಪ ಕಾರ್ಯದರ್ಶಿ ಬಿ.ಎಸ್. ಮುಗನೂರಮಠ, ಮುಖ್ಯ ಲೆಕ್ಕಾಧಿಕಾರಿ ಅಕ್ಕಮ್ಮ ಲಮಾಣಿ, ಯೋಜನಾ ನಿರ್ದೇಶಕಿ ರೇಖಾ ಡೊಳ್ಳಿನ, ಇತರರಿದ್ದರು.
ಗಳಗಿ ಗ್ರಾಮದ ಕೇತೆಶ್ವರ ಸ್ವ ಸಹಾಯ ಸಂಘ, ಉಪ್ಪಿನಬೆಟಗೇರಿಯ ಶ್ರೀ ಆದಿಶಕ್ತಿ ಸ್ವ ಸಹಾಯ ಸಂಘ, ಶ್ರೀ ವಿಶ್ವಭಾರತಿ ಸೀ ಶಕ್ತಿ ಸಂಘ, ಶ್ರೀ ಲಕ್ಷ್ಮೀ ಸ್ವ ಸಹಾಯ ಸಂಘ, ವಿಶ್ವ ಪ್ರೇರಣ ಮಹಿಳಾ ಸ್ವ ಸಹಾಯ ಸಂಘ, ಶ್ರೀ ತಾಯಿ ಹೊಣೆ ಸ್ವ ಸಹಾಯ ಸಂಘ, ಹಳ್ಯಾಳ ಗ್ರಾಮದ ಶ್ರೀ ರೇಣುಕಾದೇವಿ ಸ್ವ ಸಹಾಯ ಸಂಘ, ನರೇಂದ್ರ ಗ್ರಾಮ ಪಂಚಾಯಿತಿ ಮಟ್ಟದ ಸಂಜೀವಿನಿ ಯೋಜನೆಯ ಮಹಿಳಾ ಸ್ವ ಸಹಾಯ ಮತ್ತು ಸೀ ಶಕ್ತಿ ಗುಂಪುಗಳ ಒಕ್ಕೂಟಗಳು ಮೇಳದಲ್ಲಿ ಭಾಗಿಯಾಗಿವೆ.
ಮಾರಾಟ ಮೇಳದಲ್ಲಿ ಸ್ವಸಹಾಯ ಸಂಘಗಳ ಸದಸ್ಯರು ಉತ್ಪಾದಿಸುವ ಮಣ್ಣಿನ ಹಣತೆ, ಕರಕುಶಲ ವಸ್ತುಗಳು ಹಾಗೂ ಸಿಹಿ ತಿನಿಸುಗಳು, ಬಿದಿರಿನ ಅಲಂಕಾರಿಕ ವಸ್ತುಗಳು, ಮಣ್ಣಿನ ಅಲಂಕಾರಿಕ ವಸ್ತುಗಳು, ಕೈಮಗ್ಗದಿಂದ ತಯಾರಿಸಿದ ಕಸೂತಿ ಸೀರೆ, ಸಾವಯವ ಬೆಲ್ಲ, ಶುದ್ಧ ಕೊಬ್ಬರಿ ಹಾಗೂ ಕುಸುಬಿ ಎಣ್ಣೆಯಂಥ ಮನೆಬಳಕೆ ವಸ್ತುಗಳು ಪ್ರದರ್ಶನ ಮತ್ತು ಮಾರಾಟಕ್ಕಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net