ಕಾವೇರಿ ಮಾತೆಗೆ ದೀಪಾರತಿ

20251017_194839(0)
ಶ್ರೀರಂಗಪಟ್ಟಣದ ಸ್ನಾನಘಟ್ಟದಲ್ಲಿ ಶುಕ್ರವಾರ ತುಲಾ ಸಂಕ್ರಮಣ ಕಾವೇರಿ ತೀರ್ಥೊದ್ಬವದ ಪ್ರಯುಕ್ತ ಜೀವನದಿ ಕಾವೇರಿ ಮಾತೆಗೆ ಕೃತಜ್ಞತಾ ಪೂರ್ವಕವಾಗಿ ಪ್ರಧಾನ ಅರ್ಚಕ ವಿಜಯ ಸಾರಥಿ ನೇತೃತ್ವದಲ್ಲಿ ವೈದಿಕರು ದೀಪಾರತಿ ನೆರವೇರಿಸಲಾಯಿತು.
Published on

ಶ್ರೀರಂಗಪಟ್ಟಣ : ತುಲಾ ಸಂಕ್ರಮಣ ಪ್ರಾರಂಭೋತ್ಸವ ಹಾಗೂ ತೀರ್ಥೋದ್ಬವ ಪ್ರಯುಕ್ತ ಜೀವನದಿ ಕಾವೇರಿ ಮಾತೆಗೆ ಕೃತಜ್ಞತಾ ಪೂರ್ವಕವಾಗಿ ಶುಕ್ರವಾರ ದೀಪಾರತಿ ನೆರವೇರಿಸಲಾಯಿತು.

ಪಟ್ಟಣದ ಸ್ನಾನಘಟ್ಟದಲ್ಲಿ ಶಾಸಕರೂ ಆದ ಸೆಸ್ಕ್ ಅಧ್ಯಕ್ಷ ಎ.ಬಿ.ರಮೇಶ ಬಂಡಿಸಿದ್ದೇಗೌಡ ಸಹಕಾರದೊಂದಿಗೆ ಗೋಧೂಳಿ ಲಗ್ನದ ಶುಭ ಮುಹೂರ್ತದಲ್ಲಿ ಶ್ರೀರಂಗನಾಥಸ್ವಾಮಿ ದೇವಾಲಯದ ಪ್ರಧಾನ ಅರ್ಚಕ ವಿಜಯಸಾರಥಿ ನೇತೃತ್ವದಲ್ಲಿ ಐವರು ವೈದಿಕರು ಕಾವೇರಿ ತಟದಲ್ಲಿ ನಿರ್ಮಾಣವಾಗಿದ್ದ ವಿಶೇಷ ವೇದಿಕೆಯಲ್ಲಿ ನಿಂತು ಗೌತಮ ಋಷಿ ದರ್ಶಿತ ಶ್ರೀರಂಗನ ಪೂಜಾ ಸೇವಾ ಸಂಪ್ರದಾಯ ಬದ್ಧವಾಗಿ ಕಾವೇರಿ ಪ್ರಾರ್ಥನೆಯೊಂದಿಗೆ ಬ್ರಹ್ಮ, ವಿಷ್ಣು, ಮಹೇಶ್ವರರಿಗೆ ಗುರು ಪ್ರಾರ್ಥನೆ, ಶ್ರೀ ಗಣಪತಿ ಪೂಜೆ, ಸಂಕಲ್ಪ ಕೈಗೊಂಡು ಕಾವೇರಿ ಪೂಜೆ, ತ್ರಿಮೂರ್ತಿಗಳಿಗೆ ಚಾಮರ ಸೇವೆ, ಶಂಕುನಾದ ಸೇವೆ, ಧೂಪಾರತಿ, ಮಂತ್ರಪುಷ್ಪ, ನಾಗಾರತಿ, ರಥಾರತಿ ಅರ್ಪಣೆಯೊಂದಿಗೆ ಮಹಾಮಂಗಳಾರತಿ ನೆರವೇರಿಸಲಾಯಿತು.

ಪುರಸಭಾ ಸದಸ್ಯ ಗಂಜಾಂ ಕೃಷ್ಣಪ್ಪ, ತಹಸೀಲ್ದಾರ್ ಚೇತನಾ ಯಾದವ್, ಪುರಸಭಾ ಮುಖ್ಯಾಧಿಕಾರಿ ಸತೀಶ್, ರಾಜಸ್ವ ನಿರೀಕ್ಷಕ ರೇವಣ್ಣ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net