ಕೊಡಗಿನ ಕುವರಿ ದೀಪಾ

deepa
Published on

ಮಡಿಕೇರಿ:

ಅನುವಾದಿತ ಕಾದಂಬರಿಗಾಗಿ ಕೊಡುವ 2025ರ ಪ್ರತಿಷ್ಠಿತ ಬೂಕರ್ ಪ್ರಶಸ್ತಿ ಪಡೆದುಕೊಂಡಿರುವ ಬಾನು ಮುಷ್ತಾಕ್ ಅವರ 'ಹಾರ್ಟ್ ಲ್ಯಾಂಪ್' ಸಣ್ಣ ಕತೆಗಳ ಸಂಕಲನವನ್ನು ಇಂಗ್ಲೀಷ್‌ಗೆ ಅನುವಾದಿಸಿದ್ದು ಮಡಿಕೇರಿಯವರಾದ ದೀಪಾ ಭಸ್ತಿ. ಹಾಗಾಗಿ ಮಂಗಳವಾರ ಸಂಜೆ ಲಂಡನ್‌ನಲ್ಲಿ ಈ ಪ್ರಶಸ್ತಿ ಘೋಷಣೆ ಆಗುತ್ತಿದ್ದಂತೆ ಕೊಡಗಿನ ಸಾಹಿತ್ಯ ವಲಯದಲ್ಲಿ ಸಂಭ್ರಮ ಮನೆ ಮಾಡಿದೆ. ಕನ್ನಡಕ್ಕೆ ಮೊದಲ ಬೂಕರ್ ಪ್ರಶಸ್ತಿ ಬರುವಂತಾಗಿದ್ದರ ಹಿಂದಿನ ದೀಪಾ ಶ್ರಮಕ್ಕೆ ಮೆಚ್ಚುಗೆಯೂ ವ್ಯಕ್ತವಾಗುತ್ತಿದೆ.

ಕನ್ನಡದ ಲೇಖಕಿ ಬಾನು ಮುಷ್ತಾಕ್ ಅವರ 'ಹಾರ್ಟ್ ಲ್ಯಾಂಪ್' ಅನ್ನು ಕನ್ನಡದಿಂದ ದೀಪಾ ಭಸ್ತಿ ಅನುವಾದಿಸಿದ್ದು, ಇದೀಗ ಈ ಸಣ್ಣ ಕತೆಗಳ ಸಂಗ್ರಹ 2025ರ ಅಂತರರಾಷ್ಟಿçÃಯ ಬೂಕರ್ ಪ್ರಶಸ್ತಿಯನ್ನು ಗೆದ್ದುಕೊಂಡಿದೆ. ಈ ಪ್ರಶಸ್ತಿ ಅನುವಾದಿತ ಕಾದಂಬರಿಗಾಗಿ ವಿಶ್ವದ ಅತ್ಯಂತ ಪ್ರಭಾವಶಾಲಿ ಪ್ರಶಸ್ತಿ ಎಂದು ಗುರುತಿಸಿಕೊಂಡಿದ್ದು, ಇದೇ ಮೊದಲ ಬಾರಿಗೆ ಸಣ್ಣ ಕಥೆಗಳ ಸಂಗ್ರಹಕ್ಕೆ ಲಭಿಸಿದೆ. ಅಂತರರಾಷ್ಟಿçÃಯ ಬೂಕರ್ ಪ್ರಶಸ್ತಿ ಅನುವಾದದ ಪ್ರಮುಖ ಕೆಲಸಕ್ಕೆ ಕೊಡುವ ಗೌರವವಾಗಿದೆ. ಪ್ರಶಸ್ತಿ 50 ಸಾವಿರ ಪೌಂಡ್ ಮೊತ್ತದ ನಗದು ಬಹುಮಾನ ಒಳಗೊಂಡಿದ್ದು ಈ ಮೊತ್ತವನ್ನು ಲೇಖಕ ಮತ್ತು ಅನುವಾದಕರ ಮಧ್ಯೆ ಸಮಾನವಾಗಿ ಹಂಚಲಾಗುತ್ತದೆ.

ಅಂತಾರಾಷ್ಟಿçÃಯ ಬೂಕರ್ ಪ್ರಶಸ್ತಿಗೆ ಭಾಜನರಾಗಿರುವ ಅನುವಾದಕಿ ದೀಪಾ ಭಸ್ತಿ ಮಡಿಕೇರಿಯವರು. ಖ್ಯಾತ ಕತೆಗಾರ್ತಿ ಕೊಡಗಿನ ಗೌರಮ್ಮನವರ ಕತೆಗಳನ್ನು ಇಂಗೀಷ್‌ಗೆ ಅನುವಾದ ಮಾಡುವ ಮೂಲಕ ಜಿಲ್ಲೆಯ ಪ್ರತಿಭಾವಂತ ಕತೆಗಾರ್ತಿಯನ್ನು ಅಂತಾರಾಷ್ಟಿçÃಯ ಮಟ್ಟಕ್ಕೆ ಕೊಂಡೊಯ್ದ ಕೀರ್ತಿ ಇವರದ್ದು. ಕೋಟ ಶಿವರಾಮ ಕಾರಂತರ ಕತೆಗಳು ಕೂಡ ದೀಪಾ ಮೂಲಕ ಇಂಗ್ಲೀಷ್‌ಗೆ ಅನುವಾದಗೊಂಡಿದೆ.

ದೀಪಾ ಭಸ್ತಿ ಮಡಿಕೇರಿಯ ಕೊಡಗು ವಿದ್ಯಾಲಯದಲ್ಲಿ ಪಿಯುಸಿ ತನಕ ಓದಿ, ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿನಲ್ಲಿ ಬಿಕಾಂ ಮುಗಿಸಿ, ಮಂಗಳೂರು ವಿವಿಯಲ್ಲಿ ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡಿದ್ದಾರೆ. ಆಂಗ್ಲ ಮಾಧ್ಯಮದಲ್ಲೇ ಓದಿದ ದೀಪಾ ಅವರ ಮೇಲೆ ಮಡಿಕೇರಿ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿನಲ್ಲಿ ಆಂಗ್ಲ ಉಪನ್ಯಾಸಕರಾಗಿದ್ದ ಪಟ್ಟಾಭಿ ರಾಮ ಸೋಮಯಾಜಿ ಪ್ರಭಾವ ಸಾಕಷ್ಟಿದೆ ಎಂದು ನೆನಪಿಸಿಕೊಳ್ಳುತ್ತಾರೆ ದೀಪಾ ತಂದೆ ಬಿ.ಎನ್. ಪ್ರಕಾಶ್.

ಪ್ರತಿಷ್ಠಿತ ಆಂಗ್ಲ ದಿನಪತ್ರಿಕೆಗಳಲ್ಲಿ ಪತ್ರಕರ್ತೆ ಆಗಿದ್ದ ದೀಪಾ ಪ್ರಸ್ತುತ ಅನುವಾದ ಸಾಹಿತ್ಯದಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ. ಇವರ ಸಾಂಸ್ಕೃತಿಕ ವಿಮರ್ಶೆ, ಪ್ರಬಂಧಗಳು, ಅಂಕಣಗಳು, ಲೇಖನಗಳು ದೇಶ-ವಿದೇಶದ ಪ್ರತಿಷ್ಠಿತ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿರುತ್ತದೆ. ಹೀಗೆ ಒಮ್ಮೆ ದೀಪಾ ಅನುವಾದಿಸಿದ ಬಾನು ಮುಷ್ತಾಕ್ ಅವರ ಕತೆಯೊಂದನ್ನು ಇಂಗ್ಲೀಷ್ ಭಾಷೆಯಲ್ಲಿ ವಿದೇಶಿ ಪತ್ರಿಕೆಯಲ್ಲಿ ಗಮನಿಸಿದ ಪ್ರಕಾಶಕರೊಬ್ಬರ ಸಲಹೆ ಮೇರೆಗೆ ಸಣ್ಣ ಕತೆಗಳ ಸಂಕಲನವನ್ನು ಅಂತಾರಾಷ್ಟಿçÃಯ ಬೂಕರ್ ಪ್ರಶಸ್ತಿ ಆಯ್ಕೆ ಸಮಿತಿಗೆ ಕಳುಹಿಸಲಾಗಿತ್ತು. ನಂತರ ಇದೀಗ ಪ್ರಶಸ್ತಿ ಘೋಷಣೆ ಆಗಿದೆ ಎನ್ನುತ್ತಾರೆ ಬಿ.ಎನ್. ಪ್ರಕಾಶ್.

ಪೂರ್ಣ ಪ್ರಮಾಣದಲ್ಲಿ ಅನುವಾದ ಸಾಹಿತ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ದೀಪಾ ಭಸ್ತಿ ಮಡಿಕೇರಿ ಸಮೀಪ ಪತಿಯೊಂದಿಗೆ ನೆಲೆಸಿದ್ದಾರೆ. ಕೃಷಿಯಲ್ಲೂ ಆಸಕ್ತಿ ಇರುವ ಇವರು ಬಿಡುವು ದೊರೆತಾಗ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವುದೂ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net