ಆಳ ಸಮುದ್ರ ಮೀನುಗಾರಿಕೆಗೆ ತೆರಳಿದ ಮಂಗಳೂರು ಬೋಟು ಮುಳುಗಡೆ; ಮೀನುಗಾರರು ಪಾರು

Screenshot_20240805_142956_WhatsApp
Published on

ಮಂಗಳೂರು: ಆಳ ಸಮುದ್ರ ಮೀನುಗಾರಿಕೆಗೆ ಮಂಗಳೂರು ಕಡಲ ತೀರದಿಂದ ಸೋಮವಾರ ಮುಂಜಾನೆ ತೆರಳಿದ ಮಂಗಳೂರಿನ ಹಡಗು 80 ನಾಟಿಕಲ್ ಮೈಲು ದೂರದಲ್ಲಿ ಮುಳುಗಿದ್ದು, ಅದರಲ್ಲಿದ್ದ ಎಲ್ಲ 10 ಮಂದಿ ಮೀನುಗಾರರು ಸಮೀಪದಲ್ಲಿದ್ದ ಇನ್ನೊಂದು ಬೋಟಿನ ನೆರವಿನೊಂದಿಗೆ ಸುರಕ್ಷಿತವಾಗಿ ದಡ ಸೇರಿದ್ದಾರೆ.
ಮುಂಜಾನೆ 03.00 ಗಂಟೆಗೆ ಹೊರಟಿದ್ದ ಹಡಗಿನ ಇಂಜಿನ್ ಕೊಠಡಿಯಲ್ಲಿ ಸುಮಾರು 04.15 ಗಂಟೆಗೆ ಬೆಂಕಿ ಕಾಣಿಸಿಕೊಂಡಿದೆ. ಶಾರ್ಟ್ ಸರ್ಕ್ಯೂಟ್ ಆಗಿ ಬೆಂಕಿ ಕಾಣಿಸಿಕೊಂಡಿದೆ.
ಬೆಂಕಿಯು ಬೇಗನೇ ವ್ಯಾಪಿಸಿಕೊಂಡಿರುವ ಕಾರಣ ಮೀನುಗಾರರು ಸಮುದ್ರಕ್ಕೆ ಹಾರಿದ್ದಾರೆ. ಈ ಸಂದರ್ಭದಲ್ಲಿ ಹತ್ತಿರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ಇನ್ನೊಂದು ಬೋಟ್ ನಲ್ಲಿದ್ದ ಮೀನುಗಾರರು ನೆರವಿಗೆ ಧಾವಿಸಿದ್ದಾರೆ.
ಅಗ್ನಿಗೆ ಆಹುತಿಯಾಗಿರುವ ಹಡಗು ಸಮುದ್ರದಲ್ಲಿ ಮುಳುಗಿದ್ದು, ಸುಮಾರು 15 ಲಕ್ಷ ರೂ ಸೊತ್ತು ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ.
ಮುಳುಗಿದ ಬೋಟು ಸುರತ್ಕಲ್ ಹೊಸಬೆಟ್ಟು ನಿವಾಸಿ ರಶೀದಾ ಅವರ ಮಾಲೀಕತ್ವವನ್ನು ಹೊಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net