ನಾಳೆಯಿಂದ ಶುರುವಾಗಲಿದೆ ಯಾಂತ್ರೀಕೃತ ಮೀನುಗಾರಿಕೆ

Boat
Published on

ಮಂಗಳೂರು: ಎರಡು ತಿಂಗಳ ಮೀನುಗಾರಿಕಾ ರಜೆ ಇಂದು ಕೊನೆಯಾಗಲಿದೆ. ಆ.1ರಿಂದ ಆಳ ಸಮುದ್ರ ಯಾಂತ್ರಿಕ ಬೋಟ್‌ಗಳ ಮೀನುಗಾರಿಕೆಗೆ ಆರಂಭಗೊಳ್ಳಲಿದೆ.
ಈ ಬಾರಿಯ ಮೀನುಗಾರಿಕಾ ಋತುವಿನಲ್ಲಿ ಉತ್ತಮ ಫಸಲಿನ ನಿರೀಕ್ಷೆಯೊಂದಿಗೆ ಮೀನುಗಾರರು ಸಮುದ್ರಕ್ಕೆ ಇಳಿಯಲಿದ್ದು, ಈಗಾಗಲೇ ಬೋಟ್, ಇಂಜಿನ್ ದುರಸ್ತಿ, ಬಲೆಗಳನ್ನು ಸನ್ನದ್ಧಗೊಳಿಸುವ ಕಾರ್ಯ ಪೂರ್ಣಗೊಳಿಸಿದ್ದಾರೆ. ಐಸ್ ಪ್ಲಾಂಟ್‌ಗಳೂ ಭಾನುವಾರದಿಂದ ಕಾರ್ಯಾಚರಣೆ ಆರಂಭಿಸಿವೆ. ಬೋಟ್‌ಗಳಲ್ಲಿ ಕೆಲಸ ಮಾಡುವ ಹೊರ ರಾಜ್ಯಗಳ ಮೀನುಗಾರರು ಈಗಾಗಲೇ ಮರಳುತ್ತಿದ್ದಾರೆ.
ಆದರೆ ಏಕಕಾಲದಲ್ಲಿ ಎಲ್ಲ ಬೋಟ್‌ಗಳೂ ಕಡಲಿಗೆ ಇಳಿಯುವುದಿಲ್ಲ. ಮೊದಲು ಕೆಲವು ಬೋಟ್‌ಗಳು ಮಾತ್ರ ತೆರಳುತ್ತವೆ. ಮೀನುಗಾರ ಸಮುದಾಯದಿಂದ ಮುಂದಿನ ದಿನಗಳಲ್ಲಿ ಸಮುದ್ರ ಪೂಜೆ ನೆರವೇರಲಿದ್ದು, ಬಳಿಕ ಮೀನುಗಾರಿಕೆಗೆ ಪೂರ್ಣ ಪ್ರಮಾಣದಲ್ಲಿ ಆರಂಭವಾಗಲಿದೆ. ಮಂಗಳೂರಿನಲ್ಲಿ ಪರ್ಸೀನ್ ಹಾಗೂ ಟ್ರಾಲ್ ಸೇರಿ 1400 ಬೋಟ್‌ಗಳು ಮಂಗಳೂರು ದಕ್ಕೆಯಲ್ಲಿದ್ದು, ಬಳಿದಂತೆ ಬೆಂಗ್ರೆ ಭಾಗದಲ್ಲಿಯೂ ಸಾಕಷ್ಟು ಮೀನುಗಾರಿಕಾ ಬೋಟ್‌ಗಳಿವೆ. ಇವುಗಳಲ್ಲಿ ಆಳ ಸಮುದ್ರಕ್ಕೆ ತೆರಳುವ ಬೋಟ್‌ಗಳು ಮೊದಲು ಕಡಲಿಗೆ ಇಳಿಯುತ್ತವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net