ದೀನದಯಾಳ್ ಉಪಾಧ್ಯಾಯರು ಅಪ್ರತಿಮ ಸಂಘಟಕರು

IMG_20220925_11312866
Published on

ಚಿತ್ರದುರ್ಗ: ಬಿಜೆಪಿ ಬೆಳೆಯಲು ದೀನದಯಾಳ್ ಉಪಾಧ್ಯಾಯರು ಕಾರಣರಾಗಿದ್ದಾರೆ ಎಂದು ವಿಧಾನ ಪರಿಷತ್ ಕೆ.ಎಸ್.ನವೀನ್ ಹೇಳಿದರು. ನಗರದ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಭಾನುವಾರ ಪಂಡಿತ್ ದೀನ್‌ದಯಾಳ್ ಉಪಾಧ್ಯಾಯರ 106ನೇ ಜನ್ಮ ದಿನದಲ್ಲಿ ಮಾತನಾಡಿ,ಪಕ್ಷದ ಕಾರ್ಯಕರ್ತರಿಗೆ ದೀನದಯಾಳ್ ಅವರು ಆಲೋಚನೆಗಳನ್ನು ಮನವರಿಕೆ ಮಾಡಿಕೊಡಬೇಕಿದೆ.

ಅವರು ಹಾಕಿಕೊಟ್ಟ ದಾರಿಯಲ್ಲಿ ನಡೆಯಬೇಕಿದೆ.ದೀನದಯಾಳರ ಜೀವನ ಭಾರತ ದರ್ಶನದಂತೆ ಇದೆ. ಅವರೊಬ್ಬ ಅಪ್ರತಿಮ ಸಂಘಟಕ,ಪ್ರಬುದ್ಧ ಲೇಖಕ,ಭಾರತಕ್ಕೆ ಮುನ್ನೋಟ ನೀಡಿದ ದಿಗ್ಧ್ದರ್ಶಕರಾಗಿದ್ದರೆಂದರು. ಪಕ್ಷದ ಮುಖಂಡ ಡಾ.ಸಿದ್ದಾರ್ಥ ಗುಂಡಾರ್ಪಿ ಮಾತನಾಡಿ,ದೀನದಯಾಳರು ರಾಷ್ಟ್ರದ ಅಖಂಡತೆಯ ಕುರಿತು ಬಲವಾಗಿ ಪ್ರತಿಪಾದಿಸುತ್ತಿದ್ದರು.

ಅವರ ವಿಚಾರ ಸ್ಪಷ್ಟತೆ ವಜ್ರದಷ್ಟು ಕಠಿಣವಾಗಿದ್ದರೂ ಅದನ್ನು ನೀರಿನಂತೆ,ಯಾರಿಗೂ ನೋವಾಗದಂತೆ ಮೃದುವಾಗಿ ಹೇಳುತ್ತಿದ್ದರು. ಅಂತ್ಯೋದಯ ಪರಿಕಲ್ಪನೆ ನೀಡಿದವರು ದೀನದಯಾಳ್ ಉಪಾಧ್ಯಾಯರು. ಕಲ್ಯಾಣ ರಾಜ್ಯದ ಪರಿಕಲ್ಪನೆ ಅನುಷ್ಠಾನಕ್ಕಾಗಿ ಸಮಾಜದ ಕಟ್ಟಕಡೆ ವ್ಯಕ್ತಿಯನ್ನು ಕಣ್ಣ ಮುಂದೆ ಇರಿಸಿಕೊಂಡು ಯೋಜನೆಗಳನ್ನು ರೂಪಿಸ ಬೇಕಿದೆ ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ಎ.ಮುರಳಿ,ಪಕ್ಷದ ಮಾಜಿ ಜಿಲ್ಲಾಧ್ಯಕ್ಷ ನರೇಂದ್ರನಾಥ್ ಮಾತನಾಡಿದರು. ನರೆಂದ್ರ,ನವೀನ್ ಚಾಲುಕ್ಯ,ಶಿವಣ್ಣಾಚಾರ್, ಚಂದ್ರಿಕಾ ಲೋಕನಾಥ್,ನಗರಸಭೆ ಉಪಾಧ್ಯಕ್ಷ ಮಂಜುಳಾ ವೇದ, ಸ್ವಾಯಿ ಸಮಿತಿ ಅಧ್ಯಕ್ಷ ಶ್ರೀನಿವಾಸ್,ಸದಸ್ಯ ವೆಂಕಟೇಶ್,ಕುಡಾ ಅಧ್ಯಕ್ಷ ಸಿದ್ದಾಪುರ ಸುರೇಶ್,ಮಾಧುರಿ ಗಿರೀಶ್,ನಾಗರಾಜ್ ಬೇದ್ರೆ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net