

ನರೇಗಲ್ಲ: ಪಂಡಿತ್ ದೀನದಯಾಳ ಉಪಧ್ಯಾಯ ಅವರು ಬಿಜೆಪಿಯ ಸಮಗ್ರ ಮಾನವತಾವಾದದ ತತ್ವಶಾಸ್ತ್ರಕ್ಕಾಗಿ ವ್ಯಾಪಕವಾಗಿ ಮೆಚ್ಚುಗೆ ಪಡೆದಿದ್ದಾರೆ ಎಂದು ರೋಣ ಮಂಡಲ ಬಿಜೆಪಿ ಅಧ್ಯಕ್ಷ ಮುತ್ತು ಕಡಗದ ಹೇಳಿದರು.
ಪಟ್ಟಣದಲ್ಲಿ ಸೋಮವಾರ ರೋಣ ಮಂಡಲ, ನರೇಗಲ್ಲ ಘಟಕದ ಆಶ್ರಯದಲ್ಲಿ ಜರುಗಿದ ಪಂಡಿತ್ ದೀನದಯಾಳ್ ಉಪಾಧ್ಯಾಯರ ಜನ್ಮದಿನಾಚರಣೆಯಲ್ಲಿ ಅವರು ಮಾತನಾಡಿದರು.
ಪಂಡಿತ್ ದೀನದಯಾಳ್ ಉಪಾಧ್ಯಾಯರ ವಿಚಾರಧಾರೆಗಳಲ್ಲಿ ಭಾರತೀಯತೆ, ಧರ್ಮ, ಧರ್ಮರಾಜ್ಯ ಮತ್ತು ಅಂತ್ಯೋದಯ ಪರಿಕಲ್ಪನೆಗಳನ್ನು ಕಾಣಬಹುದು. ಪ್ರತಿಯೊಬ್ಬರಿಗೂ ಕೆಲಸ ಮಾಡುವುದು ಆರ್ಥಿಕ ಪ್ರಜಾಪ್ರಭುತ್ವದ ಅಳತೆಯಾಗಿದೆ. ದೊಡ್ಡ ಕೈಗಾರಿಕೆಗಳ ಆಧಾರಿತ ಅಭಿವೃದ್ಧಿ, ಕೇಂದ್ರೀಕರಣ ಮತ್ತು ಏಕಸ್ವಾಮ್ಯದ ಕಲ್ಪನೆಗಳನ್ನು ವಿರೋಧಿಸಿದ್ದ ಅವರು ಸ್ವದೇಶಿ ಮತ್ತು ವಿಕೇಂದ್ರೀಕರಣವನ್ನು ಪ್ರತಿಪಾದಿಸಿದ್ದರು. ಉದ್ಯೋಗಾವಕಾಶವನ್ನು ಕಡಿಮೆ ಮಾಡುವ ಯಾವುದೇ ವ್ಯವಸ್ಥೆಯು ಪ್ರಜಾಪ್ರಭುತ್ವ ವಿರೋಧಿಯಾಗಿದೆ ಎಂದರು.
ಶ್ರೀಶೈಲಪ್ಪ ಬಂಡಿಹಾಳ, ನಿಂಗಪ್ಪ ಕಣವಿ, ಫಕೀರಪ್ಪ ಬಂಬ್ಲಾಪೂರ, ಈರಪ್ಪ ಜೋಗಿ, ಯಲ್ಲಪ್ಪ ಮಣ್ಣೊಡ್ಡರ, ಮಲ್ಲಿಕಸಾಬ್ ರೋಣದ, ಮಲ್ಲಪ್ಪ ಕಾಟಿ, ಹಸನ ಕಲೇಗಾರ, ಖಾಸಿಮ ಬಳ್ಳಾರಿ, ಪ್ರಮೋದ ಕಳಕವ್ವನವರ, ರಮೇಶ ಕೋಲಕಾರ, ಕುಮಾರಸ್ವಾಮಿ ಕೋರಧಾನ್ಯಮಠ, ರವಿ ರಾಯಬಾಗಿ, ಮಹೇಶ ಶಿವಶಿಂಪರ, ಸಂತೋಚಷ ಕಡೇತೋಟದ ಇದ್ದರು.