ದೀನ ದಯಾಳ್ ಕಾರ್ಯ ಅಜರಾಮರ

MDG deena
ಮೂಡಿಗೆರೆಯಲ್ಲಿ ಪಂಡಿತ್ ದೀನ ದಯಾಳ್ ಜನ್ಮದಿನ ಆಚರಿಸಲಾಯಿತು. ಡಿ.ಎಸ್.ಸುರೇಂದ್ರ, ದೀಪಕ್ ದೊಡ್ಡಯ್ಯ, ಟಿ.ಎಂ.ಗಜೇಂದ್ರ, ಸರೋಜಾ ಸುರೇಂದ್ರ, ನಯನ ತಳವಾರ, ಪರೀಕ್ಷಿತ್ ಜಾವಳಿ, ಧನಿಕ್ ಕೋಡುದಿಣ್ಣೆ ಇತರರಿದ್ದರು.
Published on

ಮೂಡಿಗೆರೆ: ಪಂಡಿತ್ ದೀನ ದಯಾಳ್ ಅವರ ಕಾರ್ಯ ಭಾರತದ ಚರಿತ್ರೆಯಲ್ಲಿ ಅಜರಾಮರ ಎಂದು ಬಿಜೆಪಿ ಮಾಜಿ ಮಂಡಲ ಅಧ್ಯಕ್ಷ ಡಿ.ಎಸ್.ಸುರೇಂದ್ರ ತಿಳಿಸಿದರು.

ಬಿಜೆಪಿ ಕಚೇರಿಯಲ್ಲಿ ಗುರುವಾರ ಪಂಡಿತ್ ದೀನ ದಯಾಳ್ ಅವರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಪಂಡಿತ್ ದೀನ ದಯಾಳ್ ಅವರು ತಂದೆ, ತಾಯಿಯನ್ನು ಕಳೆದುಕೊಂಡು ಅನಾಥರಾಗಿ ಬಾಲ್ಯದ ಜೀವನ ಕಳೆದು ವಿದ್ಯಾರ್ಥಿಯಾಗಿದ್ದಾಗ ಜನಸಂಘದ ಜವಾಬ್ದಾರಿ ಹೊತ್ತಿದ್ದರು. ಅಂದಿನ ವಿಪಕ್ಷ ನಾಯಕನಾಗಿ, ದೇಶ, ಧರ್ಮ, ಸಮಾಜಕ್ಕಾಗಿ ಹೋರಾಟ ಮಾಡಿ ರಾಜಕೀಯ ಪಕ್ಷವೊಂದರ ಹುಟ್ಟಿಗೆ ಕಾರಣರಾದ ಅವರು, ಬಿಜೆಪಿ ಅಧಿಕಾರ ಹಿಡಿಯಲು ಕಾರಣರಾಗಿ ಯುವ ಜನತೆಗೆ ಮಾದರಿಯಾಗಿದ್ದಾರೆ ಎಂದು ತಿಳಿಸಿದರು.
ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ದೀಪಕ್ ದೊಡ್ಡಯ್ಯ ಮಾತನಾಡಿ, ದೀನ ದಯಾಳ್ ಜೀವನದ ಅಂತ್ಯ ಸಮಯದ ಆಲೋಚನೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಆತ್ಮ ನಿರ್ಭರ ಭಾರತವಾಗಿದೆ ಎಂದರು.
ಬಿಜೆಪಿ ಮಂಡಲ ಅಧ್ಯಕ್ಷ ಟಿ.ಎಂ.ಗಜೇಂದ್ರ, ಸರೋಜಾ ಸುರೇಂದ್ರ, ಪ್ರಶಾಂತ್, ಲೊಕೇಶ್, ಧನಿಕ್ ಕೋಡದಿಣ್ಣೆ, ನಯನ ತಳವಾರ, ಪದ್ಮನಾಭ್, ಪರೀಕ್ಷಿತ್ ಜಾವಳಿ, ತಾರೇಶ್, ಸುರೇಶ್ ಶೆಟ್ಟಿ, ಪಪಂ ಸದಸ್ಯ ಮನೋಜ್, ನಂದನ್, ಅಭಿಷೇಕ್, ಪ್ರವೀಣ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net