

ಸಿದ್ದಾಪುರ: ಪಟ್ಟಣದ ಸಿದ್ದಿವಿನಾಯಕ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ದೀಕ್ಷಾ ಎಸ್. ಗೌಡ ಎಸ್ಎಸ್ಎಲ್ಸಿಯಲ್ಲಿ 624 ಅಂಕ ಪಡೆದು ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದಿದ್ದಳು. ಮರುಮೌಲ್ಯಮಾಪನ ಮಾಡಿಸಿದ್ದರಿಂದ ಸಮಾಜ ವಿಜ್ಞಾನ ವಿಷಯದಲ್ಲಿ 100ಕ್ಕೆ 100ಅಂಕ ಪಡೆದು 625ಕ್ಕೆ 625 ಅಂಕ ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾಳೆ ಎಂದು ಬಿಇಒ ಎಂ.ಎಚ್. ನಾಯ್ಕ ತಿಳಿಸಿದ್ದಾರೆ.
ವಿದ್ಯಾರ್ಥಿನಿಯ ಸಾಧನೆಗೆ ಶಾಲಾ ಮುಖ್ಯೋಪಾಧ್ಯಾಯ, ಶಿಕ್ಷಕ ವೃಂದದವರು, ಶಿಕ್ಷಣ ಪ್ರಸಾರಕ ಸಮಿತಿ ಚೇರ್ಮನ್ ವಿನಾಯಕರಾವ್ ಜಿ. ಹೆಗಡೆ ಹಾಗೂ ಅಧ್ಯಕ್ಷ ಡಾ. ಶಶಿಭೂಷಣ ಹೆಗಡೆ ಹರ್ಷ ವ್ಯಕ್ತಪಡಿಸಿದ್ದಾರೆ.