ಜುಲೈ 1 ರಂದು ದೀಡ್ ನಮಸ್ಕಾರ ಪ್ರತಿಭಟನೆ

BASAVAPRABHU
BASAVAPRABHU
Published on

 ರಾಯಚೂರು ಜಿಲ್ಲೆಯಲ್ಲಿರುವ ಪೋಲಿಸ್ ಠಾಣೆಗಳಲ್ಲಿನ ಭ್ರಷ್ಟ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಜುಲೈ 1 ರಂದು ತಮಟೆ ಚಳುವಳಿ ನಡೆಸಿ ದೀಡ್ ನಮಸ್ಕಾರ ಮೂಲಕ ಪ್ರತಿಭಟನೆ ನಡೆಸಲಾಗುತ್ತಿದೆಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಎಸ್‌ಸಿ, ಎಸ್ಟಿ ವಿಭಾಗದ ರಾಜ್ಯ ಕಾರ್ಯದರ್ಶಿ ಬಸವಪ್ರಭು ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನ್ಯಾಯ ಕೋರಿ ಪೋಲಿಸ್ ಠಾಣೆಗೆ ಬಂದ ಜನ ಸಾಮಾನ್ಯರಿಗೆ ರಕ್ಷಣೆ ನೀಡಬೇಕಾದ ಅಧಿಕಾರಿಗಳು ಇಂದು ಭಕ್ಷಕರಾಗಿದ್ದಾರೆ, ನ್ಯಾಯ ಕೇಳಲು ಬಂದವರ ದೂರು ದಾಖಲಿಸಿಕೊಳ್ಳಲು ಅಧಿಕಾರಿಗಳು ಹಿಂದೆ ಮುಂದೆ ನೋಡುತ್ತಿದ್ದಾರೆ. ಆದರೆ ಸುಳ್ಳು ದೂರು ನೀಡಲು ಬಂದವರಿಂದ ತಕ್ಷಣವೇ ದೂರು ದಾಖಲಿಸಿಕೊಳ್ಳುತ್ತಿದ್ದಾರೆ.

ಇದರಿಂದ ಜನಸಾಮಾನ್ಯರಿಗೆ ರಕ್ಷಣೆ ಇಲ್ಲದಂತಾಗಿದೆ, ಜಾತಿ, ಮತ್ತು ರಾಜಕೀಯ ಮುಖಂಡರುಗಳು ಬೆಂಬಲವಾಗಿದ್ದು, ಇದರಿಂದ ನ್ಯಾಯ ಕೇಳಲು ಬಂದವರಿಂದ ದೂರು ಪಡೆಯದೇ ಸುಳ್ಳು ದೂರುಗಳನ್ನು ದಾಖಲು ಮಾಡುತ್ತಿದ್ದಾರೆ.

ಈ ಹಿನ್ನೆಲೆಯಲ್ಲಿ ಸುಳ್ಳು ದೂರುಗಳು, ಭ್ರಷ್ಟ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಅಂದು ಬೆಳಗ್ಗೆ 10 ಗಂಟೆಗೆ ನಗರದ ಗಂಜ್ ವೃತ್ತದಿಂದ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಕಚೇರಿ ವರೆಗೆ ದೀಡ್ ನಮಸ್ಕಾರ ,ತಮಟೆ ಚಳುವಳಿ ಮೂಲಕ ಪ್ರತಿಭಟನೆ ನಡೆಸಲಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ರವಿ ಕುಮಾರ, ಇಮಾಮ್ ಸಾಬ್, ವಿಜಯ ಕುಮಾರ , ಹುಸೇನ್ ಬಾಷಾ, ಆಂಜನೇಯ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net