

ಹುಬ್ಬಳ್ಳಿ: ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಪ್ರತಿಷ್ಠಾಪನೆ ನಿಮಿತ್ತ ನಗರದ ದಾಜಿಬಾನ ಪೇಟೆಯ ಶ್ರೀ ತುಳಜಾ ಭವಾನಿ ದೇವಸ್ಥಾನದಿಂದ ಗೌಳಿ ಗಲ್ಲಿಯ ಶ್ರೀರಾಮ ಮಂದಿರದವರೆಗೆ ಶ್ರೀರಾಮ ಸೇನೆ ಕಾರ್ಯಕರ್ತರು ಭಾನುವಾರ ದೀಡ್ ನಮಸ್ಕಾರ ಹಾಕಿದರು.
ದಾರಿಯುದ್ದಕ್ಕೂ ಶ್ರೀರಾಮನಿಗೆ ಜೈಕಾರ ಹಾಕಲಾಯಿತು. ಶುದ್ಧ ನೀರು ಸಿಂಪಡಿಸಿದ ನಂತರ ದೀಡ್ ನಮಸ್ಕಾರ ಕಾರ್ಯಕ್ರಮ ನಡೆಯಿತು. ಇದಕ್ಕೂ ಮೊದಲು ತುಳಜಾಭವಾನಿ ದೇವಸ್ಥಾನದಲ್ಲಿ ಅರ್ಚನೆ, ಅಭಿಷೇಕ ಜರುಗಿತು.
ಮಂಜು ಕಾಟ್ಕರ್, ಅಣ್ಣಪ್ಪ ದೀವಟಗಿ, ಬಸು ದುರ್ಗದ, ರವಿ ಮಾಳದಕರ, ಬಸವರಾಜ ಗೌಡರ, ಖಂಡೋಬ ಕಳಸನ್ನವರ ಸೇರಿ ಒಟ್ಟು 25 ಜನರು ದೀಡ್ ನಮಸ್ಕಾರ ಹಾಕಿದರು.
ಕಾರ್ಯಕರ್ತರಾದ ನಾಗರಾಜ ಹುರುಕಡ್ಲಿ, ಗುಣಧರ ದೊಡತಿ, ನಾಗರಾಜ ಸೌತಿಕಾಯಿ, ಕಿರಣ ಸಿಕ್ಕಲಿಗಾರ, ಪುನೀತ ದೊಡವಾಡ ಇತರರು ಇದ್ದರು.