ಶಾಸಕ ಶಿವಾನಂದ ಪಾಟೀಲ ಅಭಿಮಾನಿಗಳಿಂದ ದೀಡ್ ನಮಸ್ಕಾರ

Deed greetings from MLA Shivananda Patil fans
ಶಾಸಕ ಶಿವಾನಂದ ಪಾಟೀಲ ಅವರು ಚುನಾವಣೆಯಲ್ಲಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ನಿಡಗುಂದಿಯಲ್ಲಿ ಅವರ ಅಭಿಮಾನಿಗಳು ದೀಡ್ ನಮಸ್ಕಾರ ಹಾಕಿ ಹರಕೆ ಸಲ್ಲಿಸಿದರು. ಪರಶುರಾಮ ಕಾರಿ, ಸಂಗಮೇಶ ಬಳಿಗಾರ, ಶೇಖರ ರೂಡಗಿ ಇತರರಿದ್ದರು.
Published on

ನಿಡಗುಂದಿ: ಬಸವನಬಾಗೇವಾಡಿ ಮತಕ್ಷೇತ್ರದ ಶಾಸಕ ಶಿವಾನಂದ ಪಾಟೀಲ ಅವರು ಚುನಾವಣೆಯಲ್ಲಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ನಿಡಗುಂದಿಯ ಅವರ ಅಭಿಮಾನಿಗಳು ಭಾನುವಾರ ಯಲಗೂರ ಗ್ರಾಮದ ಆಂಜನೇಯ ದೇವಸ್ಥಾನದಿಂದ ಪಟ್ಟಣದ ಗ್ರಾಮದೇವತೆ ದೇವಸ್ಥಾನದವರೆಗೆ ದೀಡ್ ನಮಸ್ಕಾರ ಹಾಕಿ ಹರಕೆ ತೀರಿಸಿದರು.

ಕಳೆದ ಎರಡು ಬಾರಿಗಿಂತ ಅತ್ಯಧಿಕ ಮತಗಳ ಅಂತರದಿಂದ ಶಾಸಕ ಶಿವಾನಂದ ಪಾಟೀಲ ಗೆಲುವು ಸಾಧಿಸಿದ್ದರಿಂದ ಅಭಿಮಾನಿಗಳಾದ ರೇವಣಸಿದ್ದ ದಳವಾಯಿ, ಶಶಿ ಕಲಗುಡಿ, ಅಭಿ ಕಾಜಗಾರ, ಜೋಗಪ್ಪ ಗೋನಾಳ, ಸಂತು ವಾಲಿಕಾರ, ಹನುಮಂತ ಹುಗ್ಗಿ ಭಾನುವಾರ ಬೆಳಗ್ಗೆ ಯಲಗೂರ ಗ್ರಾಮದಿಂದ ನಿಡಗುಂದಿ ಗ್ರಾಮದೇವತೆ ದೇವಸ್ಥಾನದವರೆಗೆ ಅಂದಾಜು 5ಕಿಮೀವರೆಗೆ ದೀಡ್ ನಮಸ್ಕಾರ ಹಾಕಿ ನಮಿಸಿದರು.

ದೀಡ್ ನಮಸ್ಕಾರ ಹಾಕಿದ ಶಾಸಕರ ಅಭಿಮಾನಿಗಳಿಗೆ ನಿಡಗುಂದಿ ಕಾಂಗ್ರೆಸ್ ಕಾರ್ಯಕರ್ತರು ಸನ್ಮಾನಿಸಿದರು. ಪರಶುರಾಮ ಕಾರಿ, ಸಂಗಮೇಶ ಬಳಿಗಾರ, ಶೇಖರ ರೂಡಗಿ, ನಬಿರಸೂಲ ಬಾಣಕಾರ, ಅಲಿ ಚಪ್ಪರಬಂದ, ರವಿ ಬೋವಿವಡ್ಡರ, ತಮ್ಮಣ್ಣ ಬಂಡಿವಡ್ಡರ, ರಮೇಶ ಮಾಗಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net