

ವಿಜಯಪುರ: ನಗರದ ಕಸ್ತೂರಿ ಕಾಲನಿಯ ಶ್ರೀ ವೀರಾಂಜನೆಯ ದೇವಸ್ಥಾನದ ಲೋಕಾರ್ಪಣೆ ಸಮಾರಂಭ ಮಾ. 7, 8 ರಂದು ನಡೆಯಲಿದೆ. ದೇವಸ್ಥಾನ ಲೋಕಾರ್ಪಣೆಗೂ ಪೂರ್ವ ಮಾ. 1 ರಿಂದ ಪ್ರತಿ ದಿನ ಸಂಜೆ 7 ರಿಂದ 8.30 ರವರೆಗೆ ಪ್ರವಚನ ಕಾರ್ಯಕ್ರಮ ಆಯೋಜಿಸಲಾಗಿದೆ.
ಮಾ. 7ರಂದು ಬೆಳಗ್ಗೆ ದೇವಸ್ಥಾನ ಪ್ರತಿಷ್ಠಾಪನೆ ಹಾಗೂ ಸಂಜೆ 5ಕ್ಕೆ ಸನ್ಮಾನ ಕಾರ್ಯಕ್ರಮ ಮತ್ತು ಮನರಂಜನಾ ಕಾರ್ಯಕ್ರಮಗಳು ಜರುಗಲಿವೆ.
ಮಾ. 8 ರಂದು ಬೆಳಗ್ಗೆ 9 ರಿಂದ ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದರ ಉತ್ಸವದೊಂದಿಗೆ ಇಲ್ಲಿನ ಕಾವಿ ಪ್ಲಾಟ್ನಲ್ಲಿರುವ ಪ್ರಸನ್ನ ಗಣೇಶ ದೇವಾಲಯದಿಂದ ಕಸ್ತೂರಿ ಕಾಲನಿವರೆಗೆ 501 ಮಹಾಕುಂಭ ವಿವಿಧ ವಾದ್ಯ ವೈಭವಗಳೊಂದಿಗೆ ಪ್ರಮುಖ ರಸ್ತೆಗಳ ಮೂಲಕ ಕಸ್ತೂರಿ ಕಾಲನಿಗೆ ತೆರಳಲಿದೆ.
ನಂತರ ಮಧ್ಯಾಹ್ನ 12ಕ್ಕೆ ಸಾರ್ವಜನಿಕ ಸಭೆ ನಡೆಯಲಿದೆ. ಸಾರ್ವಜನಿಕೆ ಸಭೆಗೆ ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತರಾಧ್ಯ ಶಿವಾಚಾರ್ಯ ಭಗವತ್ಪಾದಕರು, ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಂ.ಬಿ. ಪಾಟೀಲ, ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ, ನಾಗಠಾಣ ಶಾಸಕ ವಿಠಲ ಕಟಕಧೋಂಡ, ಸಂಸದ ರಮೇಶ ಜಿಗಜಿಣಗಿ, ಜನಪ್ರತಿನಿಧಿಗಳು ಆಗಮಿಸಲಿದ್ದಾರೆ. ದೇವಸ್ಥಾನ ಆರಾಧನಾ ಸಮಿತಿ ಅಧ್ಯಕ್ಷ ಮಡಿವಾಳಪ್ಪಗೌಡ (ಗೌಡು) ಬಿರಾದಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.