

ವಸತಿ ನಿಲಯ ಕಟ್ಟಡ ಲೋಕಾರ್ಪಣೆ
ವಿಜಯವಾಣಿ ಸುದ್ದಿಜಾಲ ಧಾರವಾಡ
ನಗರದ ಮುಮ್ಮಿಗಟ್ಟಿಯ ರಾಷ್ಟ್ರೊತ್ಥಾನ ಪದವಿ ಪೂರ್ವ ಕಾಲೇಜಿನ ನೂತನ ವಸತಿ ನಿಲಯ ಕಟ್ಟಡದ ಲೋಕಾರ್ಪಣೆ ಹಾಗೂ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ವಿದ್ಯಾರಂಭ ಕಾರ್ಯಕ್ರಮ ಸೋಮವಾರ ನೆರವೇರಿತು.
ಅತಿಥಿಯಾಗಿ ಆಗಮಿಸಿದ್ದ ಪ್ರಜ್ಞಾ ಪ್ರವಾಹ ಅಖಿಲ ಭಾರತೀಯ ಸಹ ಸಂಯೋಜಕ ರಘುನಂದನ ಮಾತನಾಡಿ, ಭಾರತೀಯರು ಶ್ರೀಮಂತರಾಗಬೇಕು. ಭಾರತೀಯರು ಶ್ರೀಮಂತರಾಗಲು ಮಕ್ಕಳಲ್ಲಿ ನಡತೆ ಮತ್ತು ಸಾಮರ್ಥ್ಯ ಹೆಚ್ಚಿಸಿದಾಗ ಮಾತ್ರ ಭವ್ಯ ಭಾರತ ಕಟ್ಟಲು ಸಾಧ್ಯ ಎಂದರು.
ಅಧ್ಯಕ್ಷತೆ ವಹಿಸಿದ್ದ ರಾಷ್ಟ್ರೊತ್ಥಾನ ಸಿಬಿಎಸ್ಇ ಶಾಲೆಗಳ ಉತ್ತರ ವಲಯ ಆಡಳಿತಾತ್ಮಕ ಪ್ರಮುಖ ಜಯಣ್ಣ ಎಚ್. ಮಾತನಾಡಿದರು. ರಾಷ್ಟ್ರೊತ್ಥಾನ ವಿದ್ಯಾಲಯದ ಕಾರ್ಯದರ್ಶಿ ರಾಘವೇಂದ್ರ ಅಂಬೇಕರ ಪ್ರಾಸ್ತಾವಿಕವಾಗಿ ಮಾತನಾಡಿದರು.
ಪ್ರಾಚಾರ್ಯೆ ಡಾ. ಅನಿತಾ ರೈ, ರವಿಪ್ರಕಾಶ, ಡಾ. ಶ್ರೀಕಾಂತ ಕೆ., ಕೃಷ್ಣ ಜೋಶಿ, ಎಂ.ಎನ್. ಮಠಪತಿ, ಇತರರು ಇದ್ದರು.
ರಂಗನಾಥ ಕುಲಕರ್ಣಿ ಸ್ವಾಗತಿಸಿದರು. ಭಾರತಿ ವಂದಿಸಿದರು.