ಕಾವೇರಿಗೆ ತ್ರಿನೇತ್ರ ಶ್ರೀಗಳಿಂದ ಬಾಗಿನ ಸಮರ್ಪಣೆ

25-08---krs1 (4)
ಕೃಷ್ಣರಾಜಸಾಗರ ಅಣೆಕಟ್ಟೆ ಭರ್ತಿಯಾದ ಹಿನ್ನೆಲೆಯಲ್ಲಿ ಭಾನುವಾರ ಬೇಬಿ ಮಠ ಮತ್ತು ಚಂದ್ರವನ ಆಶ್ರಮದ ಪೀಠಾಪತಿ ಡಾ. ಶ್ರೀ ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮೀಜಿ ಅವರು ಭಕ್ತಾದಿಗಳ ಜತೆಗೂಡಿ ಶುಭಲಗ್ನದಲ್ಲಿ ಬೃಂದಾವನದಲ್ಲಿರುವ ಶ್ರೀ ಕಾವೇರಿ ಮಾತೆಗೆ ಬಾಗಿನ ಅರ್ಪಿಸಿದರು.
Published on

ಕೆ.ಆರ್.ಸಾಗರ: ಕೃಷ್ಣರಾಜಸಾಗರ ಅಣೆಕಟ್ಟೆ ಭರ್ತಿಯಾದ ಹಿನ್ನೆಲೆಯಲ್ಲಿ ಶತಾಯಷಿ ಲಿಂಗೈಕ್ಯ ಶ್ರೀ ಮರಿದೇವರು ಶಿವಯೋಗಿ ಸ್ವಾಮೀಜಿ ಅವರ ಆಶಯದಂತೆ ಭಾನುವಾರ ಬೇಬಿ ಮಠ ಮತ್ತು ಚಂದ್ರವನ ಆಶ್ರಮದ ಪೀಠಾಪತಿ ಡಾ.ಶ್ರೀ ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮೀಜಿ ಬೆಳಗ್ಗೆ ಬೃಂದಾವನದಲ್ಲಿರುವ ಶ್ರೀ ಕಾವೇರಿ ಮಾತೆಗೆ ಬಾಗಿನ ಅರ್ಪಿಸಿದರು.

ಮೊದಲಿಗೆ ಭಕ್ತರೊಂದಿಗೆ ಶ್ರೀ ಕಾವೇರಿ ಪ್ರತಿಮೆಗೆ ಹಾಗೂ ಪಾದುಕೆಗೆ ಪೂಜೆ ಸಲ್ಲಿಸಿ, ನಂತರ ಬಾಗಿನಗಳಿಗೆ ಮತ್ತು ಬುತ್ತಿಗೆ ಮಂತ್ರಾಕ್ಷತೆ ವೇದ-ಘೋಷದೊಂದಿಗೆ ಮುತ್ತೈದೆಯರ ಜೊತೆಗೂಡಿ ಪೂಜೆ ಸಲ್ಲಿಸಿದರು. ಸ್ಥಳದಲ್ಲಿದ್ದ ಮಹಿಳೆಯರಿಗೆ ಬಳೆ ಮತ್ತು ಮಡಿಲಕ್ಕಿ ನೀಡಿದರು.

ನಂತರ ಮಾತನಾಡಿದ ಶ್ರೀಗಳು, ಅಣೆಕಟ್ಟೆ ತುಂಬಿದಾಗಗಲೆಲ್ಲ ಶ್ರೀ ಮಠದ ಮರಿದೇವರು ಶೀವಯೋಗಿ ಸ್ವಾಮೀಜಿ ಬಾಗಿನ ಅರ್ಪಿಸುತ್ತಿದ್ದ ಪದ್ಧತಿಯನ್ನು ನಾವು ಮುಂದುವರಿಸಿದ್ದು, ಪ್ರತಿ ವರ್ಷದಂತೆ ಈ ಬಾರಿ ಕೂಡ ಭಕ್ತಾಗಳ ಜತೆಗೂಡಿ ನಾಡಿನ ಜನತೆಗೆ ಅತಿವೃಷ್ಟಿ-ಅನಾವೃಷ್ಟಿ ಆಗದಿರಲಿ, ನಾಡು ಸುಭಿಕ್ಷವಾಗಿರಲಿ, ಮಂಡ್ಯ ಜಿಲ್ಲೆ ಸೇರಿದಂತೆ ಕಾವೇರಿ ಪ್ರಾಂತ್ಯದ ಜನತೆ ಸಂತೋಷದಿಂದ ಸಲು ಬೆಳೆದು ಜನರು ಸಂತೋಷದಿಂದ ಸಮೃದ್ಧವಾಗಿರಲ್ಲಿ ಎಂಬ ಆಶಯದಿಂದ ಕಾವೇರಿ ಮಾತೆಗೆ ಶುಭಲಗ್ನದಲ್ಲಿ ಬಾಗಿನ ಅರ್ಪಿಸಿದ್ದೇವೆ ಎಂದರು.
ಅಖಿಲ ಭಾರತ ವೀರಶೈವ ಮಹಾಸಭಾ ಮಂಡ್ಯ ಜಿಲ್ಲಾಧ್ಯಕ್ಷ ಆನಂದ, ಪಾಂಡುವಪುರ ತಾಲೂಕು ಅಧ್ಯಕ್ಷ ಶಿವಕುಮಾರ, ಉದ್ಯಮಿ ಶೈಲಾ ರಾಮಣ್ಣನವರ್, ನಿವೃತ್ತ ಉಪವಿಭಾಗಾಕಾರಿ ಚಿಕ್ಕತಿಮ್ಮಯ್ಯ, ಟಿ.ಪಿ.ಶಿವಕುಮಾರ್, ಅಖಿಲ ಭಾರತ ವೀರಶೈವ ಮಹಾಸಭಾ ನಿರ್ದೇಶಕ , ಹಾಗನಹಳ್ಳಿ ಸುರೇಶ್ ಸೇರಿದಂತೆ ಭಕ್ತರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net