

ಅರಕಲಗೂಡು: ತಾಲೂಕಿನ ಮುಂಡಗೋಡು ಗ್ರಾಮದೇವತೆ ದೇವಸ್ಥಾನ ಲೋಕಾರ್ಪಣೆ ಕಾರ್ಯಕ್ರಮ ಸಂಭ್ರಮದಿಂದ ನೆರವೇರಿತು.
ಶಿಥಿಲಗೊಂಡಿದ್ದ ದೇವಸ್ಥಾನವನ್ನು ಗ್ರಾಮಸ್ಥರು ಹಾಗೂ ದಾನಿಗಳ ಸಹಕಾರದಿಂದ ಜೀರ್ಣೋದ್ಧಾರ ಮಾಡಲಾಗಿತ್ತು.
ಕೆಸವತ್ತೂರು ಮಠದ ಶ್ರೀ ಬಸವರಾಜೇಂದ್ರ ಸ್ವಾಮೀಜಿ ಸಮ್ಮುಖದಲ್ಲಿ ವೀರಗಾಸೆ, ಮಂಗಳವಾದ್ಯದೊಂದಿಗೆ ಸುಮಂಗಲಿಯರ ಕಳಸ ಮೆರವಣಿಗೆಯೊಂದಿಗೆ ವಿವಿಧ ಪ್ರಜಾ ವಿಧಾನಗಳನ್ನು ವಿಧಿವತ್ತಾಗಿ ಪೂರೈಸಲಾಯಿತು. ಬುಧವಾರ ನೂತನ ದೇವರ ವಿಗ್ರಹ ಮತ್ತು ಕಳಸ ಪ್ರತಿಷ್ಠಾಪನೆ ನಡೆಯಿತು. ಅಪಾರ ಭಕ್ತರು ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಪ್ರಸಾದ ಸ್ವೀಕರಿಸಿದರು.