ರಾಮಡ್ಕ ಭಜನಾ ಮಂದಿರ ಲೋಕಾರ್ಪಣೆ

New Project (2)
Published on

ಕಡಬ: ಕುಂತೂರು ಗ್ರಾಮದ ಕುಂತೂರುಪದವು ರಾಮಡ್ಕದಲ್ಲಿ ನವೀಕೃತಗೊಂಡ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂದಿರ ಲೋಕಾರ್ಪಣೆ ಗಣಪತಿ ಹೋಮ, ಭಜನೆ, ಕುಣಿತ ಭಜನೆ, ಶ್ರೀ ಸತ್ಯನಾರಾಯಣ ಪೂಜೆ, ದುರ್ಗಾಪೂಜೆ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮಗಳೊಂದಿಗೆ ಶುಕ್ರವಾರ ನಡೆಯಿತು.

ಬೆಳಗ್ಗೆ ಗಣಪತಿ ಹೋಮ ನಡೆಯಿತು. ಬಳಿಕ ಉದ್ಯಮಿ ಸುರೇಶ್ ಕೆ.ಕುಂಡಡ್ಕ ಲೋಕಾರ್ಪಣೆಗೊಳಿಸಿದರು. ಸಂಜೆ ವಿವಿಧ ಭಜನಾ ತಂಡಗಳಿಂದ ಭಜನೆ ನಡೆಯಿತು. ಭಜನಾ ಮಂಗಳಾರತಿ, ರಾತ್ರಿ ಪೂಜಾ ಮಹಾಮಂಗಳಾರತಿ ನಡೆಯಿತು. ಬಳಿಕ ಧಾರ್ಮಿಕ ಸಭೆ, ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ಶ್ರೀ ದುರ್ಗಾಪರಮೇಶ್ವರಿ ಸೇವಾ ಟ್ರಸ್ಟ್ ಅಧ್ಯಕ್ಷ ಹರೀಶ್ ಮುಂಡಾಲ ಮತ್ರಾಡಿ, ಉಪಾಧ್ಯಕ್ಷ ಸುಜಿತ್ ಕುಂಡಡ್ಕ, ಕಾರ್ಯದರ್ಶಿ ಶಶಿಕಿರಣ್ ಪದವು, ಜತೆ ಕಾರ್ಯದರ್ಶಿ ನಿಧೀಶ್ ಅಲಂಗಪ್ಪೆ, ಕೋಶಾಧಿಕಾರಿ ದೀಕ್ಷಿತ್ ಅಲಂಗಪ್ಪೆ, ಸದಸ್ಯರಾದ ಬಾಬು ಗೌಡ ಕೆ.ಎಸ್.ಕುಂಡಡ್ಕ, ಪಿ.ಜಿ.ರಾಜು ಕಂಡತ್ತಡ್ಕ, ಸುಬ್ರಹ್ಮಣ್ಯ ಕೆಂದ್ರಾಜೆ, ಪ್ರಶಾಂತ್ ಭಟ್ ಕೆಂದ್ರಾಜೆ, ನೀಲಯ್ಯ ಗೌಡ ಕಂಡತ್ತಡ್ಕ, ವಸಂತ ಗೌಡ ಜಾಲುಮನೆ, ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ಡಾ.ಕುಮಾರ ಸುಬ್ರಹ್ಮಣ್ಯ ಭಟ್, ಅಧ್ಯಕ್ಷ ಉದಯಶಂಕರ ಭಟ್ ಬಲ್ಲಾಳಿಕೆ, ಉತ್ಸವ ಸಮಿತಿ ಅಧ್ಯಕ್ಷ ಯತೀಶ ಕುಂಡಡ್ಕ ಮೊದಲಾದವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net