ಕಲಶೇಶ್ವರ ದೇವಾಲಯಕ್ಕೆ ರಜತ ಕವಚ ಸಮರ್ಪಣೆ

14kls1 (1)
ಕಳಸ ಕಲಶೇಶ್ವರ ದೇವಸ್ಥಾನದ ದ್ವಾರಪಾಲಕ ಬಾಗಿಲಿನ ಶ್ರೀಮತಿ ಸರೋಜಮ್ಮ ಶ್ರೀ ಎಚ್.ಡಿ.ಭೋಜೇಗೌಡ್ರು ಮತ್ತು ಕಟುಂಬಸ್ಥರು ರಜತ ಕವಚ ಸಮರ್ಪಣೆ ಮಾಡಿದರು.
Published on

ಕಳಸ: ಕಳಸ ಕಲಶೇಶ್ವರ ದೇವಾಲಯದ ದ್ವಾರಪಾಲಕ ಬಾಗಿಲಿನ ಚೌಕಟ್ಟಿಗೆ ದಿ.ಶ್ರೀಮತಿ ಬೆಳ್ಳಮ್ಮ ದಿ.ಶ್ರೀ ಎಚ್. ಧರಣೇ ಗೌಡರು ಇವರ ಸ್ಮರಣಾರ್ಥ ಹೊಸೂರಿನ ಶ್ರೀಮತಿ ಸರೋಜಮ್ಮ , ಶ್ರೀಎಚ್.ಡಿ.ಭೋಜೇಗೌಡ್ರು ಮತ್ತು ಕಟುಂಬಸ್ಥರು ಇವರು ರಜತ ಕವಚ ಸಮರ್ಪಣೆ ಮಾಡಿದರು.
ಬುಧವಾರ ಬೆಳಗ್ಗೆ ಕಲಶೇಶ್ವರನಿಗೆ ವಿವಿಧ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿದ ಬಳಿಕ ರಚತ ಕವಚವನ್ನು ಸಮರ್ಪಿಸಲಾಯಿತು. ಕಳಸ ಕಲಶೇಶ್ವರ ಸ್ವಾಮಿಯವರ ಜಾತ್ರಾ ಮಹೋತ್ಸವದ ಅಂಗವಾಗಿ ಜಾತ್ರೆಯ ಮೊದಲ ದಿನ ಗಣಪತಿ ಪೂಜೆ, ಅಂಕುರಾರ್ಪಣ ನಡೆಯಿತು.
ರಜತ ಕವಚ ದಾನಿಗಳಾದ ಎಚ್.ಡಿ.ಭೋಜೇಗೌಡ್ರು, ಲಕ್ಷ್ಮ್ಮಣ ಗೌಡ, ವೆಂಕಟೇಶ ಗೌಡ, ರಾಮದಾಸ್‌ಗೌಡ, ಗಗನ್‌ಗೌಡ, ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ವೆಂಕಟಸುಬ್ಬಯ್ಯ, ಸದಸ್ಯರಾದ ಕೆ.ಕೆ.ಬಾಲಕೃಷ್ಣ ಭಟ್, ಸತೀಶ್ ಕಲ್ಲಾನೆ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net