ಚಕ್ರಚೌಡೇಶ್ವರಿ ದೇವಾಲಯದ ಕುಂಬಾಭಿಷೇಕ

sri
ಕೋಡಿ ಮಠದ ಶ್ರೀಗಳು ಆಶೀರ್ವಚನ ನೀಡಿದರು, ಚುಂಚನಗಿರಿ ಶಾಖಾ ಮಠದ ಮಂಗಳನಾಥಸ್ವಾಮಿ ಇದ್ದರು.
Published on

ವಿಜಯವಾಣಿ ಸುದ್ದಿಜಾಲ ಸೂಲಿಬೆಲೆ

ಜೀವರಾಶಿಗಳಲ್ಲಿ ಮಾನವ ಜನ್ಮ ಬಹಳ ಶ್ರೇಷ್ಟವಾದುದು, ಧಾರ್ಮಿಕ ಕಾರ್ಯಗಳ ಮೂಲಕ ಮಾನವ ಜನ್ಮ ಪಾವನವಾಗುತ್ತದೆ ಎಂದು ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಶ್ರೀಗಳು ಹೇಳಿದರು.

ನಗರೇನಹಳ್ಳಿ ಗ್ರಾಮದ ಚಕ್ರಚೌಡೇಶ್ವರಿ ದೇವಸ್ಥಾನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ರಾಜಗೋಪುರ ಹಾಗೂ ಮಹಾಕಾಳಿ ವಿಗ್ರಹ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮಾನವ ಅರಿಷ್ಡವರ್ಗಗಳನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕು, ಪಂಚೇಂದ್ರಿಯಗಳನ್ನು ನಿಗ್ರಹಿಸಿಕೊಳ್ಳಬೇಕು ಎಂದು ನುಡಿದರು.ದೈವ ಸಾನಿಧ್ಯದಿಂದ ಮಾನಸಿಕ ನೆಮ್ಮದಿ ಸಿಗುತ್ತದೆ ಎಲ್ಲರೂ ದೇವರ ಕೃಪಗೆ ಪಾತ್ರರಾಗಬೇಕು, ನಮ್ಮ ಸನಾತನ ಧರ್ಮವನ್ನು ಪಸರಿಸುವ ಕೆಲಸಕ್ಕೆ ಯುವ ಸಮುದಾಯ ಮುಂದಾಗಬೇಕು ಎಂದುಆದಿಚುಂಚನಗಿರಿ ಶಾಖಾ ಮಠದ ಮಂಗಳನಾಥಸ್ವಾಮಿ ಆಶೀರ್ವಚನ ನೀಡಿದರು.

ಸಾಮೂಹಿಕ ವಿವಾಹ:

ನ.10 ರಂದು ದೈವಸಾನಿಧ್ಯದಲ್ಲಿ ಸಾಮೂಹಿಕ ವಿವಾಹಗಳು ಹಮ್ಮಿಕೊಳ್ಳಲಾಗಿದ್ದು ಶ್ರೀ ಕ್ಷೇತ್ರ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಶ್ರೀ ನಿರ್ಮಲಾನಂದಣಾಥ ಸ್ವಾಮೀಜಿ, ಪ್ರತ್ಯಂಗಿರಾ ದೇವಿಯ ಆರಾಧಕರಾದ ಡಾ.ಮಹರ್ಷಿ ಗುರೂಜಿ ಅವರು ದಿವ್ಯ ಸಾನಿಧ್ಯವಹಿಸಲಿದ್ದಾರೆ ಎಂದುಚಕ್ರಚೌಡೇಶ್ವರಿ ದೇವಾಲಯದ ಪ್ರಧಾನ ಅರ್ಚಕ ವಿಜಯ ಗುರೂಜಿ ತಿಳಿಸಿದರು.

ದೇವಾಲಯದ ಮಹಾಗಣಪತಿ, ನಾಗದೇವತೆಗಳ ಮತ್ತು ಚಕ್ರಚೌಡೇಶ್ವರಿ ಹಾಗೂ ಮುನೇಶ್ವರಸ್ವಾಮಿ ಸಮೇತ ಮಹೇಶ್ವರಮ್ಮ, ಮಾರಮ್ಮ, ಕರಗದಮ್ಮ, ಸಪ್ತಮಾತೃಕ ದೇವಾಲಯದ ರಾಜಗೋಪುರ ಮತ್ತು ಮಹಾಕಾಳಿ ವಿಗ್ರಹ ಪ್ರತಿಷ್ಠಾಪನ ಮಹಾ ಕುಂಬಾಭಿಷೇಕ ಮಹೋತ್ಸವ ಅದ್ದೂರಿಯಾಗಿ ನೆರವೇರಿತು.ಅಗಮಿಕರಾದ ಹರಿಪ್ರಸಾದ್ ದೇವತಾ ಕೈಂಕರ್ಯಗಳನ್ನು ನೆರವೇರಿಸಿದರು.

--------

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net