

ವಿಜಯವಾಣಿ ಸುದ್ದಿಜಾಲ ಧಾರವಾಡ
ಶೃಂಗೇರಿ ಶಂಕರ ಮಠದ ಧಾರವಾಡ ಶಾಖೆ ವತಿಯಿಂದ ಅ. 16ರಂದು ಜಿಲ್ಲಾಮಟ್ಟದ ಕಲ್ಯಾಣವೃಷ್ಟಿ ಮಹಾಭಿಯಾನ ಸ್ತೋತ್ರ ಸಮರ್ಪಣೆ ಸಮಾರಂಭವನ್ನು ಶ್ರೀ ಮಠದ ವಿದ್ಯಾಭಾರತೀ ಸಭಾಭವನದಲ್ಲಿ ಏರ್ಪಡಿಸಲಾಗಿದೆ.
ಶೃಂಗೇರಿ ಶ್ರೀಗಳ ಪ್ರತಿನಿಧಿಯಾಗಿ ಉಮೇಶ ಹರಿಹರ, ಶ್ರೀಶಂಕರ ತತ್ವ ಪ್ರಸಾರ ಅಭಿಯಾನದ ಜಿಲ್ಲಾಧ್ಯಕ್ಷ ರವಿ ದೇಶಪಾಂಡೆ, ಜಿ.ಆರ್. ಪಾಟೀಲ, ಶೃಂಗೇರಿ ಶಾಖಾ ಮಠದ ವ್ಯವಸ್ಥಾಪಕ ವಿಠ್ಠಲ ನಾರಾಯಣ ಶೆಟ್ಟಿ, ಮಹಿಳಾ ಮಂಡಳ ಪದಾಧಿಕಾರಿಗಳು, ಇತರರು ಉತಸ್ಥಿತರಿರುವರು.
ಶೃಂಗೇರಿ ಶಂಕರಾಚಾರ್ಯ ಮಠದ ಶ್ರೀ ಭಾರತಿತೀರ್ಥ ಸ್ವಾಮೀಜಿ ಸನ್ಯಾಸ ಸ್ವೀಕರಿಸಿ 50 ವರ್ಷವಾಗಿದೆ. ಹೀಗಾಗಿ "ಸುವರ್ಣ ಭಾರತೀ' ಹೆಸರಿನ ಕಾರ್ಯಕ್ರಮವನ್ನು ವರ್ಷಪೂರ್ತಿ ಆಚರಿಸಲು ಶ್ರೀ ವಿಧುಶೇಖರಭಾರತೀ ಸ್ವಾಮೀಜಿ ಸಂಕಲ್ಪಿಸಿದ್ದಾರೆ. ಅದರಂತೆ ಲೋಕ ಕ್ಷೇಮಾರ್ಥ ಪಂಚಾಯತನ ದೇವರಾಧಾನೆ, ಇತರ ಅನೇಕ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಲಿದ್ದು, ಅವುಗಳಲ್ಲಿ ಶಂಕರ ಸ್ತೋತ್ರ ಸಮರ್ಪಣೆಯೂ ಒಂದು. ಹೀಗಾಗಿ ನಗರದಲ್ಲಿ ಕಲ್ಯಾಣವೃಷ್ಟಿ ಮಹಾಭಿಯಾನ ಸ್ತೋತ್ರ ಸಮರ್ಪಣೆ ಸಮಾರಂಭ ಏರ್ಪಡಿಸಲಾಗಿದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಪ್ರಕಟಣೆ ತಿಳಿಸಿದೆ.