

ಕುಮಟಾ: ತಾಲೂಕಿನ ಕೋನಳ್ಳಿಯ ವನದುರ್ಗಾ ಮಂದಿರದಲ್ಲಿ ಹಮ್ಮಿಕೊಂಡಿರುವ ಕನ್ಯಾಡಿ ರಾಮಕ್ಷೇತ್ರದ ಪೀಠಾಧೀಶ ಮಹಾಮಂಡಲೇಶ್ವರ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಚಾತುರ್ಮಾಸ್ಯ ವ್ರತಾಚಾರಣೆಯಲ್ಲಿ ಪಾಲ್ಗೊಂಡ ಹರಿಯಾಣದ ಸ್ವಾಮಿ ಭೋಲಾಗಿರಿ ಜುನಾ ಅಖಾಡಾದ ಮಹಾಂತ ಭೋಲಾನಾಥ ಗುರೂಜಿ ಅವರಿಗೆ ಗುರುಸೇವೆ ಸಮರ್ಪಿಸಲಾಯಿತು.
ಹನೇಹಳ್ಳಿ ಹಾಗೂ ಬಂಕಿಕೊಡ್ಲ ಗ್ರಾಮದ ನಾಮಧಾರಿ ಸಮಾಜದವರು ಬ್ರಹ್ಮಾನಂದ ಸ್ವಾಮೀಜಿಗಳಿಗೆ ಗುರುಪಾದುಕಾ ಪೂಜೆ ಸಲ್ಲಿಸಿದರು. ಆಚಾರಿ ಸಮಾಜದ ಮುಖ್ಯಸ್ಥ ಮಂಜುನಾಥ ಆಚಾರಿ, ಮುರ್ಕುಂಡೇಶ್ವರ ಮಂದಿರದ ಅರ್ಚಕ ನಾಗರಾಜ ಗುನಗಾ ಹಾಗೂ ಬಂಕಿಕೊಡ್ಲದ ಭೈರವ ಡಿ. ನಾಯ್ಕ ದಂಪತಿಗಳು ಗುರುಸೇವೆ ಸಲ್ಲಿಸಿದರು. ಚಾತುರ್ಮಾಸ್ಯ ಸಮಿತಿ ಅಧ್ಯಕ್ಷ ಎಚ್.ಆರ್. ನಾಯ್ಕ, ನಾಮಧಾರಿ ಸಂಘದ ಅಧ್ಯಕ್ಷ ಮಂಜುನಾಥ ನಾಯ್ಕ ಇತರರಿದ್ದರು.