ದೇವಿಗೆ ಬಂಗಾರದ ಕಿರೀಟ, ಬೆಳ್ಳಿ ತಟ್ಟೆ ಸಮರ್ಪಣೆ

web
Published on

ಧಾರವಾಡ: ನಗರದ ಕೆಲಗೇರಿ ರಸ್ತೆಯಲ್ಲಿರುವ ಶಾಂತಿನಿಕೇತನನಗರದ ಶ್ರೀ ಕರಿಯಮ್ಮ ದೇವಿಗೆ ಭಕ್ತರಿಂದ ಕಾಣಿಕೆ ರೂಪದಲ್ಲಿ ಸಂಗ್ರಹಿಸಿದ 26 ಲಕ್ಷ ರೂ. ವೆಚ್ಚದ 40 ತೊಲೆ ಬಂಗಾರದ ಕಿರೀಟವನ್ನು ಶುಕ್ರವಾರ ಸಮರ್ಪಿಸಲಾಯಿತು. ಇದೇವೇಳೆ ಬೆಳ್ಳಿ ತಟ್ಟೆಯನ್ನೂ ಸಮರ್ಪಿಸಲಾಯತು. ಕರಿಯಮ್ಮ ದೇವಸ್ಥಾನದ ಟ್ರಸ್ಟ್ ಕಮೀಟಿ ಚೇರ್ಮನ್ ಮತ್ತು ಶಾಸಕ ಎನ್.ಎಚ್. ಕೋನರೆಡ್ಡಿ ಅವರ ನೇತೃತ್ವದಲ್ಲಿ ಕಿರೀಟಧಾರಣೆ ಸಮಾರಂಭ ನಡೆಯಿತು. ಶಾಸಕ ವಿನಯ ಕುಲಕರ್ಣಿ ಪತ್ನಿ ಶಿವಲೀಲಾ ಕುಲಕರ್ಣಿ ಹಾಗೂ ಅಪಾರ ಭಕ್ತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net