

ಮೈಸೂರು: ಗಾಯಕ ನಿತಿನ್ ರಾಜಾರಾಮ್ ಶಾಸ್ತ್ರಿ ನೇತೃತ್ವದ ನಿತಿನ್ಸ್ ನಾದಾಮೃತ ಅರ್ಪಿಸಿರುವ ಹಾಗೂ ಕನ್ನಡದ ಹೆಸರಾಂತ ಕವಿ ಡಾ.ಎಚ್.ಎಸ್. ವೆಂಕಟೇಶ್ ಮೂರ್ತಿ ಅವರು ಕನ್ನಡಕ್ಕೆ ಭಾಷಾಂತರಿಸಿದ ವಿಶ್ವ ಕವಿ ರವೀಂದ್ರ ಠಾಗೋರ್ ವಿರಚಿತ ಗೀತಾಂಜಲಿ ಸಂಕಲನದ ಲೋಕಾರ್ಪಣೆ ಕಾರ್ಯಕ್ರಮ ನಗರದಲ್ಲಿ ಇತ್ತೀಚೆಗೆ ಆಯೋಜಿಸಲಾಗಿತ್ತು.
ಆಯ್ದ ಕವಿತೆಗಳ ರವೀಂದ್ರ ಗೀತ ಸುಗಮ ಸಂಗೀತ ಸಂಕಲನದ ಆನ್‌ಲೈನ್ ಲೋಕಾರ್ಪಣೆದಲ್ಲಿ ಸಂಗೀತ ಸಂಯೋಜಕ ಎನ್. ಎಸ್.ಪ್ರಸಾದ್ ಸಂಯೋಜಿಸಿದ ನಿತಿನ್ ಮತ್ತು ಸ್ನೇಹ ಅವರು ಹಾಡುಗಳು ಲೋಕಾರ್ಪಣೆಗೊಂಡವು.
ಹಿರಿಯ ಹಿನ್ನೆಲೆ ಗಾಯಕಿ ಎಚ್.ಆರ್. ಲೀಲಾವತಿ, ಕರ್ನಾಟಕ ಸುಗಮ ಸಂಗೀತ ಪರಿಷತ್ತಿನ ಮೈಸೂರು ಘಟಕದ ಅಧ್ಯಕ್ಷ ಡಾ.ನಾಗರಾಜ್ ವಿ. ಬೈರಿ, ಸಂಸ್ಕೃತಿ ಚಿಂತಕ ಶಂಕರ್ ದೇವನೂರು, ಸಂಗೀತ ನಿರ್ದೇಶಕ ಮ್ಯಾಟಡೊಲಿನ್ ಪ್ರಸಾದ್, ಪಂಡಿತ್ ವೀರಭದ್ರಯ್ಯ ಹಿರೇಮಠ್, ಸಾಹಿತಿ ಕೆ .ಎನ್. ಲಾವಣ್ಯ ಪ್ರಭ ಇದ್ದರು.