ಬಾಳೂರು ಮಲ್ಲಿಕಾರ್ಜುನ ದೇಗುಲ ಲೋಕಾರ್ಪಣೆ

SDP Temple
Published on

ಸಿದ್ದಾಪುರ: ತಾಲೂಕಿನ ಬಾಳೂರು ಮಲ್ಲಿಕಾರ್ಜುನ ದೇವಸ್ಥಾನ ಟ್ರಸ್ಟ್ ಹಾಗೂ ಸೀಮಾ ಪರಿಷತ್ ಬಾಳೂರಿನ ನೂತನ ದೇವಾಲಯದ ಲೋಕಾರ್ಪಣೆ ಹಾಗೂ ಮಲ್ಲಿಕಾರ್ಜುನ ದೇವರ ಮರುಪ್ರತಿಷ್ಠಾಪನೆ ಜ.31ರಿಂದ ಫೆ.2ರವರೆಗೆ ನಡೆಯಲಿದೆ ಎಂದು ದೇವಾಲಯದ ಅಧ್ಯಕ್ಷ ರಾಮಚಂದ್ರ ಡಿ. ಭಟ್ಟ ಊರತೋಟ ಹೇಳಿದರು.

ಅವರು ಬಾಳೂರು ಮಲ್ಲಿಕಾರ್ಜುನ ದೇವಾಲಯದಲ್ಲಿ ಸುದ್ದಿಗೋಷ್ಠಿಯಲ್ಲಿ ಗುರುವಾರ ಮಾತನಾಡಿ, ಬಾಳೂರಲ್ಲಿನ ಮಲ್ಲಿಕಾರ್ಜುನ ಲಿಂಗವು ಸಾಕ್ಷಾತ್ ಶ್ರೀಶೈಲದ ಮಲ್ಲಿಕಾರ್ಜುನ ದೇವಾಲಯದಿಂದ ಸಂಗ್ರಹಿಸಲ್ಪಟ್ಟಿದೆ ಎಂಬ ಪ್ರತೀತಿ ಇದೆ. ಸುಮಾರು ಎಂಟು ನೂರು ವರ್ಷಗಳಷ್ಟು ಹಳೆಯದಾಗಿದೆ ಎಂದರು.

ಈಗಾಗಲೇ ದೇವಾಲಯದಲ್ಲಿ ದೇವರ ಮರುಪ್ರತಿಷ್ಠಾಪನೆ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಆರಂಭಗೊಂಡಿವೆ. ಜ.31ರಂದು ಬೆಳಗ್ಗೆ ಚಂಡಿಕಾ ಹೋಮ, ಮಹಾರುದ್ರ ಪಾರಾಯಣ ಹಾಗೂ ಮಾತೆಯರಿಂದ ಕುಂಕುಮಾರ್ಚನೆ ನಂತರ ಪ್ರಸಾದ ಭೋಜನ. ಮಧ್ಯಾಹ್ನ 3.30ರಿಂದ ವಿ.ವಿಶ್ವನಾಥ ಭಟ್ಟ ನೀರಗಾನ ಅವರಿಂದ ಪ್ರವಚನ ನಡೆಯಲಿದೆ.

ಫೆ.1ರಂದು ದೇವಾಲಯ ಲೋಕಾರ್ಪಣೆ, ಮಹಾರುದ್ರಯಾಗ, ಪ್ರಸಾದ ಭೋಜನ. ಮಧ್ಯಾಹ್ನ 3.30ರಿಂದ ವಿ.ಚಂದ್ರಶೇಖರ ಭಟ್ಟ ಗಾಳೀಮನೆ ಇವರಿಂದ ಪ್ರವಚನ ನಂತರ ಸ್ಥಳೀಯರಿಂದ ಭಜನಾ ಸೇವೆ ನಡೆಯಲಿದೆ.

ಫೆ.2ರಂದು ಸ್ವರ್ಣವಲ್ಲಿ ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮೀಜಿ ಹಾಗೂ ಶ್ರೀಮನ್ನೆಲೆಮಾವ ಮಠದ ಶ್ರೀಮಾಧವಾನಂದ ಭಾರತೀ ಮಹಾಸ್ವಾಮೀಜಿ ಆಗಮಿಸಲಿದ್ದು ಪೂರ್ಣಕುಂಭದೊಂದಿಗೆ ಸ್ವಾಗತಿಸಲಾಗುತ್ತದೆ. ನಂತರ ಶ್ರೀಗಳವರ ಪಾದಪೂಜೆ, ಭೀಕ್ಷಾ ವಂದನೆ, ತೀರ್ಥ ಪ್ರಸಾದ ಸ್ವೀಕಾರ ನಂತರ ಪ್ರಸಾದ ಭೋಜನ. ಮಧ್ಯಾಹ್ನ 3.30ರಿಂದ ಸಮಾರೋಪ ಸಮಾರಂಭ ನಡೆಯಲಿದ್ದು ಉಭಯ ಶ್ರೀಗಳು ಸಾನ್ನಿಧ್ಯ ವಹಿಸುವರು. ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ, ಆಡಳಿತ ಸುಧಾರಣಾ ಸಮಿತಿ ಅಧ್ಯಕ್ಷ ಆರ್.ವಿ.ದೇಶಪಾಂಡೆ, ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಶಾಸಕರಾದ ಭೀಮಣ್ಣ ನಾಯ್ಕ, ಶಿವರಾಮ ಹೆಬ್ಬಾರ, ಎಸ್.ವಿ. ಸಂಕನೂರು, ಶಾಂತಾರಾಮ ಸಿದ್ದಿ, ಪ್ರಮುಖರಾದ ವಿ.ಎನ್. ಹೆಗಡೆ ಬೊಮ್ಮನಳ್ಳಿ, ಪ್ರದೀಪ ಹೆಗಡೆ ಕರ್ಜಗಿ, ಡಾ. ಶಶಿಭೂಷಣ ಹೆಗಡೆ, ಗೋಪಾಲಕೃಷ್ಣ ವೈದ್ಯ, ರಾಮಕೃಷ್ಣ ಹೆಗಡೆ ಕಡವೆ, ಆರ್.ಎಂ. ಹೆಗಡೆ ಬಾಳೇಸರ, ಭಾಸಕರ ಚಕ್ರವರ್ತಿ, ಸಿ. ಜಯಪ್ರಕಾಶ, ಉಪೇಂದ್ರ ಪೈ, ಶಂಕರ ಭಟ್ಟ ಮಸ್ಗುತ್ತಿ, ವಿ.ಡಿ. ಭಟ್ಟ ಊರತೋಟ ಪಾಲ್ಗೊಳ್ಳುವರು. ಶಿವಾರ್ಪಣಂ ಸ್ಮರಣ ಸಂಚಿಕೆ ಬಿಡುಗಡೆಗೊಳ್ಳಲಿದೆ. ರಾತ್ರಿ 9ರಿಂದ ಹಿಲ್ಲೂರು ಯಕ್ಷ ಮಿತ್ರ ಬಳಗದವರಿಂದ ಯಕ್ಷಗಾನ ಪ್ರದರ್ಶನಗೊಳ್ಳಲಿದೆ ಎಂದರು.

ದೇವಾಲಯದ ಉಪಾಧ್ಯಕ್ಷ ವೆಂಕಟರಮಣ ಭಟ್ಟ ಮಸ್ಗುತ್ತಿ, ಕಾರ್ಯದರ್ಶಿ ರಾಜಾರಾಮ ಹೆಗಡೆ ಹೊಸ್ಮನೆ, ನಾಗಪತಿ ಭಟ್ಟ ಮಿಳಗಾರ, ಗಣಪತಿ ಭಟ್ಟ ಊರತೋಟ, ಜಿ.ಪಿ. ಭಟ್ಟ ಕಲ್ಮನೆ, ಜಿ.ಎಂ. ಹೆಗಡೆ ಹೊಸ್ಗದ್ದೆ, ಅರ್ಚಕ ವೇ.ಸುಬ್ರಾಯ ಭಟ್ಟ ಬಾಳೂರು, ಪುರೋಹಿತ ವೇ.ವೆಂಕಟರಮಣ ಭಟ್ಟ ಹೆಗ್ಗಾರಬೈಲ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net