ಕರ್ತವ್ಯದಲ್ಲಿ ಸಮರ್ಪಣಾ ಭಾವ ಅಗತ್ಯ

Sanmana
ಉಡುಪಿ ಜಿಪಂನಿಂದ ಸೇವಾ ನಿವೃತ್ತರಾದ ಶ್ರೀನಿವಾಸ ರಾವ್ ಅವರನ್ನು ಸನ್ಮಾನಿಸಲಾಯಿತು.
Published on

ವಿಜಯವಾಣಿ ಸುದ್ದಿಜಾಲ ಉಡುಪಿ

ಸರ್ಕಾರಿ ಸೇವೆಯಲ್ಲಿ ಸವಾಜದ ಕಟ್ಟಕಡೆಯ ವ್ಯಕ್ತಿಗೂ ಸೇವೆ ನೀಡಲು ಗರಿಷ್ಠ ಅವಕಾಶವಿದ್ದು, ಸಮರ್ಪಣಾ ಭಾವದಿಂದ ಕರ್ತವ್ಯದಲ್ಲಿ ತೊಡಗಿಕೊಂಡಾಗ ಯಶಸ್ಸು ಕಾಣಲು ಸಾಧ್ಯ. ನನಗೂ ಯಶಸ್ವಿಯಾಗಿ ಸೇವೆ ನೀಡಲು ಸಹಕರಿಸಿದ ಜಿಲ್ಲೆಯ ಎಲ್ಲ ಹಿರಿ-ಕಿರಿಯ ಹಾಗೂ ಕ್ಷೇತ್ರ ಮಟ್ಟದ ಅಧಿಕಾರಿಗಳು, ಜನಪ್ರತಿನಿಧಿಗಳ ಸಹಕಾರ ಸ್ಮರಣೀಯವಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಯೋಜನಾ ನಿರ್ದೇಶಕ ಶ್ರೀನಿವಾಸ ರಾವ್ ಹೇಳಿದರು.

ಸೇವೆಯಿಂದ ನಿವೃತ್ತರಾದ ಹಿನ್ನೆಲೆಯಲ್ಲಿ ಜಿಲ್ಲಾ ಪಂಚಾಯಿತಿಯ ಡಾ.ವಿ.ಎಸ್.ಆಚಾರ್ಯ ಸಭಾಂಗಣದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ಜಿಪಂ ಸಿಇಒ ಪ್ರತೀಕ ಬಾಯಲ್ ವಾತನಾಡಿ, ಉಡುಪಿ ಜಿಪಂ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡು ವಿಶೇಷ ಪ್ರಶಸ್ತಿ ಹಾಗೂ ಪುರಸ್ಕಾರ ಗಳಿಸಿದೆ. ಬದ್ಧತೆ ಹೊಂದಿದ ಅಧಿಕಾರಿಗಳಿಂದ ಅದು ಸಾಧ್ಯವಾಗಿದ್ದು, ಶ್ರೀನಿವಾಸ ರಾವ್ ಶ್ರಮ ಬಹುಮುಖ್ಯವಾಗಿದೆ. ಜಿಪಂ ಉಪ ಕಾರ್ಯದರ್ಶಿ, ಮುಖ್ಯ ಲೆಕ್ಕಾಧಿಕಾರಿ, ಯೋಜನಾಧಿಕಾರಿ, ಯೋಜನಾ ನಿರ್ದೇಶಕ ಸೇರಿದಂತೆ ಹಲವು ಉನ್ನತ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ ಎಂದರು.

ಕುಂದಾಪುರ ಉಪ ವಿಭಾಗದ ಸಹಾಯಕ ಆಯುಕ್ತೆ ರಶ್ಮಿ, ಜಿಪಂ ಮುಖ್ಯ ಯೋಜನಾಧಿಕಾರಿ ಡಾ.ಉದಯಕುವಾರ್ ಶೆಟ್ಟಿ, ಜಿಪಂ, ತಾಪಂ, ವಿವಿಧ ಗ್ರಾಪಂಗಳ ಅಧಿಕಾರಿಗಳು, ಜೆಜೆಎಂ ಹಾಗೂ ಎಸ್‌ಬಿಎಂ ಯೋಜನಾ ಸಂಯೋಜಕರು, ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ ಹಾಗೂ ಶ್ರೀನಿವಾಸ ರಾವ್ ಪತ್ನಿ ಪೂರ್ಣಿಮಾ ಇದ್ದರು. ಪಿಡಿಒ ನಾಗೇಂದ್ರ ಪ್ರಾರ್ಥಿಸಿದರು. ಬ್ರಹ್ಮಾವರ ತಾಪಂ ಸಹಾಯಕ ನಿರ್ದೇಶಕ ಮಹೇಶ ಕೆ. ಕಾರ್ಯಕ್ರಮ ನಿರ್ವಹಿಸಿದರು.

ನಾವೀನ್ಯತೆಯ ಕಾರ್ಯಚಟುವಟಿಕೆ ಹಾಗೂ ದಕ್ಷತೆಯ ಕಾರ್ಯಶೈಲಿಯಿಂದಾಗಿ ಶ್ರೀನಿವಾಸ ರಾವ್ ಅವರು ವಿಶಿಷ್ಟ ಅಧಿಕಾರಿಯಾಗಿದ್ದರು. ಅವರ ಸೇವೆ ಸದಾ ಸ್ಮರಣೀಯ. ಡಾ.ಕೆ.ವಿದ್ಯಾಕುವಾರಿ. ಜಿಲ್ಲಾಧಿಕಾರಿ https://www.vijayavani.net/honored-for-an-outstanding-student https://www.vijayavani.net/vandse-government-model-higher-primary-school-inauguration-ceremony

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net