

ಉಡುಪಿ: ಭಾರತೀಯ ಜನ ಸಂಘದ ಸಂಸ್ಥಾಪಕದಲ್ಲೊಬ್ಬರಾದ ಪಂಡಿತ್ ದೀನದಯಾಳ್ ಉಪಾಧ್ಯಾಯ ರಾಜಕೀಯ ಕ್ಷೇತ್ರದಲ್ಲಿ ಸಚ್ಚಾರಿತ್ರ್ಯ, ದೇಶಭಕ್ತಿ, ಧ್ಯೇಯವಾದ, ಏಕಾತ್ಮ ಮಾನವತಾವಾದ ಹಾಗೂ ಉನ್ನತ ರಾಜಕೀಯ ಮೌಲ್ಯಗಳಿಗೆ ಮೇಲ್ಪಂಕ್ತಿಯಾಗಿ ಪ್ರೇರಣೆ ನೀಡುತ್ತಿದ್ದು, ಕಾರ್ಯಕರ್ತರಿಗೆ ಪ್ರಾತ@ ಸ್ಮರಣೀಯರಾಗಿದ್ದಾರೆ ಎಂದು ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಹೇಳಿದರು.
ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಪಂಡಿತ್ ದೀನ ದಯಾಳ್ ಉಪಾಧ್ಯಾಯ ಬಲಿದಾನ ಸ್ಮರಣಾರ್ಥ ನಡೆದ ಸಮರ್ಪಣಾ ದಿನದಲ್ಲಿ ಭಾವಚಿತ್ರಕ್ಕೆ 'ಪುಷ್ಪಾರ್ಚನೆ' ನೆರವೇರಿಸಿ ಮಾತನಾಡಿದರು. ಸಾವಿನ ಬಳಿಕವೂ ಯಾರನ್ನು ಜನರು ನಿತ್ಯ ಸ್ಮರಣೆ ಮಾಡುತ್ತಿರುತ್ತಾರೋ ಅಂಥವರ ಜೀವನ ಸಾರ್ಥಕವಾಗುತ್ತದೆ. ದೀನ್ ದಯಾಳ್ ಅವರು ಅಂಥವರಲ್ಲಿ ಒಬ್ಬರಾಗಿದ್ದಾರೆ. ಸಮಾಜಮುಖಿ ಚಿಂತನೆಯಿಂದ ಅವರ ಹೆಸರು ಶಾಶ್ವತವಾಗಿದೆ. ಅಂತ್ಯೋದಯ ಮುಂತಾದ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ಬಿಜೆಪಿ ಅವರು ಹಾಕಿಕೊಟ್ಟ ದಾರಿಯಲ್ಲಿ ಮುನ್ನಡೆಯುತ್ತಿದೆ ಎಂದರು.
ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಅಧ್ಯಕ್ಷತೆ ವಹಿಸಿ, ದೀನ್ ದಯಾಳ್ ಉಪಾಧ್ಯಾಯ ಅವರು ಪಕ್ಷಕ್ಕೆ ಭದ್ರ ತಳಹದಿಯನ್ನು ಹಾಕಿಕೊಟ್ಟಿದ್ದಾರೆ. ಪಕ್ಷ$$$್ವನ್ನು ಕಟ್ಟಿ ಬೆಳೆಸಿದವರನ್ನು ಸ್ಮರಿಸುವುದು ಬಿಜೆಪಿ ಸಂಸತಿ. ಅವರ ಜೀವನಾದರ್ಶ ಎಲ್ಲರಿಗೂ ಮಾದರಿ ಎಂದರು. ಈ ಸಂದರ್ಭದಲ್ಲಿ ಬಿಜೆಪಿ ಚಟುವಟಿಕೆಗೆ ಸಮರ್ಪಣಾ ನಿಧಿ ಅರ್ಪಣೆ ಕಾರ್ಯಕ್ರಮ ನಡೆಯಿತು. ಪ್ರಧಾನ ಕಾರ್ಯದರ್ಶಿಗಳಾದ ಹೆರ್ಗ ದಿನಕರ ಹೆಗ್ಡೆ, ರೇಶ್ಮಾ ಉದಯ್ ಶೆಟ್ಟಿ, ಮಾಜಿ ಶಾಸಕ ಲಾಲಾಜಿ ಮೆಂಡನ್, ನಗರಸಭಾ ಅಧ್ಯಕ್ಷ ಪ್ರಭಾಕರ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.