ಈಶ ಕೇಂದ್ರದಲ್ಲಿ 54 ಅಡಿ ಎತ್ತರದ ಮಹಾಶೂಲದ ಲೋಕಾರ್ಪಣೆ

14cbp3bb
Published on

ಚಿಕ್ಕಬಳ್ಳಾಪುರ: ಈಶ ಆದಿಯೋಗಿ ಧ್ಯಾನ ಕೇಂದ್ರದಲ್ಲಿ ಮಕರ ಸಂಕ್ರಾAತಿ ಹಬ್ಬದ ಹಿನ್ನೆಲೆಯಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳನ್ನು ಕೈಗೊಂಡಿದ್ದು ಭವ್ಯವಾದ 5೪ ಅಡಿ ಎತ್ತರದ ಮಹಾಶೂಲ (ಶಿವನ ತ್ರಿಶೂಲ)ವನ್ನು ಲೋಕಾರ್ಪಣೆಗೊಳಿಸಲಾಯಿತು.

ದೇಶ ವಿದೇಶಗಳಿಂದ ಜನರನ್ನು ಸೆಳೆಯುತ್ತಿರುವ ಇಲ್ಲಿನ ಅಂತಾರಾಷ್ಟ್ರೀಯ ಮಟ್ಟದ ಆಧ್ಯಾತ್ಮಿಕ ಕೇಂದ್ರದಲ್ಲಿ ಮಹಾಶಿವರಾತ್ರಿ, ನಾಗಪಂಚಮಿ ಸೇರಿದಂತೆ ಹಬ್ಬಗಳನ್ನು ಧಾರ್ಮಿಕ ವಿವಿಧ ಪೂಜಾ ಕಾರ್ಯಕ್ರಮಗಳೊಂದಿಗೆ ಅರ್ಥಪೂರ್ಣವಾಗಿ ಆಚರಿಸಿಕೊಂಡು ಬರಲಾಗುತ್ತಿದೆ. ಇಲ್ಲಿನ ೧೧೨ ಆದಿಯೋಗಿ, ಬಸವಣ್ಣ, ನಾಗದೇವನನ್ನು ಪ್ರತಿಷ್ಠಾಪಿಸಲಾಗಿದೆ. ಈಗ ಮಕರ ಸಂಕ್ರಾAತಿಗೆ 54 ಅಡಿ ಎತ್ತರದ ಶಿವನ ತ್ರಿಶೂಲವನ್ನು ಉದ್ಘಾಟಿಸಲಾಗಿದೆ. ಸೃಷ್ಟಿ, ಸ್ಥಿತಿ ಮತ್ತು ಲಯ ಎಂಬ ಮೂರು ಪ್ರತ್ಯೇಕವೆನಿಸುವ ಅಂಶಗಳ ಏಕತ್ವವನ್ನು ಮಹಾಶೂಲವು ಪ್ರತಿನಿಧಿಸುತ್ತದೆ.

*ಸದ್ಗುರುಗಳ ನೇತೃತ್ವದ ಪೂಜೆ

ತ್ರಿಶೂಲ ಉದ್ಘಾಟನೆಯ ಕಾರ್ಯಕ್ರಮವು ಜ.೧೪ ರಂದು ಸಂಜೆ 6 ಕ್ಕೆ ಸದ್ಗುರುಗಳ ನೇತೃತ್ವದಲ್ಲಿ ನಡೆಯಿತು. ಮಹಾಶೂಲದ ಬಳಿ ವಿಶೇಷವಾದ ಪಂಚಭೂತಗಳನ್ನು ಶುದ್ಧೀಕರಿಸುವ ಪಂಚಭೂತ ಪ್ರಕ್ರಿಯೆಯನ್ನು ಇಲ್ಲಿ ಮೊದಲ ಬಾರಿಗೆ ಈಶ ಬ್ರಹ್ಮಚಾರಿಗಳ ಮೂಲಕ ಕೈಗೊಳ್ಳಲಾಗಿತ್ತು. ಸಂಗೀತ, ನೃತ್ಯ ಪ್ರದರ್ಶನ, ಈಶ ಸಂಸತಿ ವಿದ್ಯಾರ್ಥಿಗಳಿಂದ ವಿಶೇಷ ಸಾಂಸತಿಕ ಕಾರ್ಯಕ್ರಮ, ಆದಿಯೋಗಿ ದಿವ್ಯ ದರ್ಶನ ಸೇರಿದಂತೆ ಆಕರ್ಷಕ ವಿವಿಧ ಕಾರ್ಯಕ್ರಮಗಳು ನಡೆದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net