6 ಲಕ್ಷ ರಾಮತಾರಕ ಮಂತ್ರ ಸಮರ್ಪಣೆ

havyak
Published on

ಹುಬ್ಬಳ್ಳಿ: ಅಯೋಧ್ಯೆಯಲ್ಲಿ ಶ್ರೀರಾಮ ದೇವರ ಪ್ರಾಣ ಪ್ರತಿಷ್ಠಾಪನೆ ಜರುಗುತ್ತಿರುವ ಹಿನ್ನೆಲೆಯಲ್ಲಿ ಹುಬ್ಬಳ್ಳಿ-ಧಾರವಾಡ ಹವ್ಯಕ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಸಂಸ್ಥೆ ಆಶ್ರಯದಲ್ಲಿ ಆರು ಲಕ್ಷ ರಾಮ ತಾರಕ ಮಂತ್ರದ ಸಮರ್ಪಣೆ ಮಾಡಲಾಯಿತು.

ಸಾಮೂಹಿಕ ರಾಮತಾರಕ ಮಂತ್ರ ಪಠಣದಲ್ಲಿ ನೂರಾರು ಜನರು ಭಾಗಿಯಾಗಿದ್ದರು. ಹವ್ಯಕ ಮಹಿಳಾ ಮಂಡಳದ ವೀಣಾ ಹೆಗಡೆ ಮತ್ತು ಜಯಶ್ರೀ ಹೆಗಡೆ ಅವರ ನೇತೃತ್ವದಲ್ಲಿ ಭಜನಾ ಗೀತಗಾಯನ ಕಾರ್ಯಕ್ರಮವೂ ನಡೆಯಿತು.

ಕರ್ನಾಟಕ ಕುಟುಂಬ ಪ್ರಬೋಧನ ಉತ್ತರ ಸಂಯೋಜಕ ಪ.ರಾ. ನಾಗರಾಜ್ ಮತ್ತು ರಾಷ್ಟ್ರೀಯ ಸ್ವಯಂ ಸೇವಕ ಸಂಘ ಧಾರವಾಡ ವಿಭಾಗದ ಡಾ. ಮಧುಸೂದನ ಕುಲಕರ್ಣಿ ವಿಶೇಷ ಆಹ್ವಾನಿತರಾಗಿ ಆಗಮಿಸಿದ್ದರು. ಸಂಸ್ಥೆಯ ಅಧ್ಯಕ್ಷ ವಿ.ಎಂ. ಭಟ್ ಅಧ್ಯಕ್ಷತೆ ವಹಿಸಿದ್ದರು. ಗೌರವ ಕಾರ್ಯದರ್ಶಿ ಸುದರ್ಶನ ಜಿ. ಎಚ್., ಪದಾಧಿಕಾರಿಗಳಾದ ಸುರೇಶ ಹೆಗಡೆ, ಜಿ. ಕೆ. ಹೆಗಡೆ, ಮೂರ್ತಿ ಹೆಗಡೆ, ಗಜಾನನ ಭಾಗವತ, ಗೋಪಾಲಕೃಷ್ಣ ಹೆಗಡೆ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net