ಕೃಷಿ ಉತ್ಪಾದನೆ ಕ್ಷೀಣ ಆತಂಕದ ವಿಷಯ

gan (12)
Published on

ಗಂಗೊಳ್ಳಿ: ಬೆಳೆಯುತ್ತಿರುವ ಜನಸಂಖ್ಯೆಗೆ ಅನುಗುಣವಾಗಿ ವರ್ಷದಿಂದ ವರ್ಷಕ್ಕೆ ಕೃಷಿ ಉತ್ಪಾದನೆ ಹೆಚ್ಚುತ್ತಿರಬೇಕು. ಬದಲಾದ ಕಾಲವಾನದಲ್ಲಿ ಕೃಷಿ ಉತ್ಪಾದನೆ ಕ್ಷೀಣಿಸುತ್ತಿರುವುದು ಆತಂಕದ ವಿಷಯವಾಗಿದೆ. ಕೃಷಿ ಉಳಿದರೆ ವಾತ್ರ ವಾನವ ಜನಾಂಗ ಉಳಿಯಲಿದೆ ಎಂದು ವಲಯ ಕೃಷಿ ಸಂಶೋಧನಾ ಮತ್ತು ಕೃಷಿ ವಿಜ್ಞಾನ ಕೇಂದ್ರ ಬ್ರಹ್ಮಾವರ ಡಾ.ಧನಂಜಯ ಹೇಳಿದರು.

ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಿಗಳ ವಿಶ್ವವಿದ್ಯಾಲಯ ಇರುವಕ್ಕಿ ಶಿವಮೊಗ್ಗ, ಭಾರತೀಯ ಕೃಷಿ ಅನುಸಂಧಾನ ಪರಿಷತ್ ನವದೆಹಲಿ, ಕೃಷಿ ವಿಜ್ಞಾನ ಕೇಂದ್ರ ಬ್ರಹ್ಮಾವರ ಉಡುಪಿ ಜಿಲ್ಲೆ ಅವರ ಪ್ರಾತ್ಯಕ್ಷಿಕೆಯಡಿಯಲ್ಲಿ ರೈತರ ಸಹಭಾಗಿತ್ವದಲ್ಲಿ ಗಂಗೊಳ್ಳಿಯಲ್ಲಿ ನಡೆದ ಭತ್ತದ ನೇಜಿ ಉತ್ಪಾದನೆ, ತರಬೇತಿ ಕಾರ್ಯಕ್ರಮದಲ್ಲಿ ವಾತನಾಡಿದರು.

ಹಿರಿಯ ಕ್ಷೇತ್ರ ಅಧೀಕ್ಷ ಡಾ.ಶಂಕರ. ಭತ್ತದ ಸಸಿ, ಮುಡಿ ತಯಾರಿಕೆ ಹಾಗೂ ಯಾಂತ್ರಿಕ ಕೃಷಿ ಕುರಿತು ವಾತನಾಡಿದರು. ಯುವ ಕೃಷಿಕ ವಿಜಯ ಪೂಜಾರಿ ಗಂಗೊಳ್ಳಿ ತಮ್ಮ ಕೃಷಿ ಜೀವನದ ಕುರಿತು ಅನುಭವ ಹಂಚಿಕೊಂಡರು.

ಪ್ರಾಧ್ಯಾಪಕ ಕಷಿ ವಿಸ್ತರಣೆ ಡಾ.ಮೋಹನ ಕುವಾರ್ ವಿ., ರೈತರಾದ ಶ್ರೀನಿವಾಸ್ ಸೇರಿಗಾರ್, ಅಣ್ಣಪ್ಪ ಸೇರಿಗಾರ್, ಗೋವಿಂದ ಪೂಜಾರಿ, ಅನಿಲ್, ವಿವೇಕ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net