ಅವಳಿ ತಾಲೂಕು ಬರ ಪೀಡಿತವೆಂದು ಘೋಷಿಸಿ

Declare twin taluk drought prone
ಇಳಕಲ್ಲ ನಗರದ ತಾಲೂಕು ಆಡಳಿತ ಕಚೇರಿಯಲ್ಲಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಪದಾಧಿಕಾರಿಗಳು ತಹಸೀಲ್ದಾರ್ ಬಸವರಾಜ ಮೇಳವಂಕಿ ಮನವಿ ಅರ್ಪಿಸಿದರು. ಗುರು ಗಾಣಿಗೇರ, ಮೊಹಸೀನ್ ನದಾಫ್, ಬಸನಗೌಡ ಪೈಲ್, ಎಂ.ಆರ್.ಪಾಟೀಲ ಇತರರಿದ್ದರು.
Published on

ಇಳಕಲ್ಲ(ಗ್ರಾ) : ಹುನಗುಂದ ಮತ್ತು ಇಳಕಲ್ಲ ಅವಳಿ ತಾಲೂಕುಗಳಲ್ಲಿ ಮುಂಗಾರು ಮಳೆ ವಿಲವಾದ ಹಿನ್ನೆಲೆಯಲ್ಲಿ ತಾಲೂಕನ್ನು ಬರ ಪೀಡಿತ ಪ್ರದೇಶವೆಂದು ಘೋಷಿಸಿ ರೈತರಿಗೆ ಸಹಾಯಧನ ಮಂಜೂರು ಮಾಡಬೇಕು ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪದಾಧಿಕಾರಿಗಳು ತಹಸೀಲ್ದಾರ್ ಬಸವರಾಜ ಮೇಳವಂಕಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ರೈತ ಸಂಘದ ಕಾರ್ಯಾಧ್ಯಕ್ಷ ಗುರು ಗಾಣಿಗೇರ ಮಾತನಾಡಿ, ಇಳಕಲ್ಲ-ಹುನಗುಂದ ಅವಳಿ ತಾಲೂಕಿನಲ್ಲಿ ಮುಂಗಾರು ಮಳೆ ವಿಲವಾಗಿ ಬೆಳೆಗಳು ಒಣಗಿವೆ ಎಂದರು.

ಸಂಘದ ಜಿಲ್ಲಾ ಉಪಾಧ್ಯಕ್ಷ ಶಶಿಕಾಂತ ಬಂಡರಗಲ್ಲ ಮಾತನಾಡಿ, ಇಳಕಲ್ಲ ತಾಲೂಕು ಸಂಪೂರ್ಣ ನೀರಾವರಿ ವ್ಯಾಪ್ತಿಗೆ ಒಳಪಡಬೇಕು. ಅವಳಿ ತಾಲೂಕಿನ ಕೆರೆಗಳನ್ನು ಅಭಿವೃದ್ಧಿಪಡಿಸಿ ನೀರು ತುಂಬಿಸಬೇಕು.

ಹೊಲಗಳಿಗೆ ಹೋಗುವ ರಸ್ತೆ ಸುಧಾರಣೆ ಮಾಡಬೇಕು, ಅವಳಿ ತಾಲೂಕಿನ ರೈತರ ಪಂಪ್‌ಸೆಟ್‌ಗಳಿಗೆ ಹಗಲು ಹೊತ್ತು ಗುಣಮಟ್ಟದ ತ್ರಿಫೇಸ್ 10 ತಾಸು ವಿದ್ಯುತ್ ಪೂರೈಸಬೇಕು. ಇಳಕಲ್ಲ ತಾಲೂಕಿನಲ್ಲಿ ಪೂರ್ಣಾವಧಿಯ ನ್ಯಾಯಾಲಯ ಸ್ಥಾಪಿಸಿ ಜನರಿಗೆ ಶೀಘ್ರವಾಗಿ ನ್ಯಾಯ ದೊರಕಿಸಿಕೊಡಲು ಅನುಕೂಲ ಮಾಡಿಕೊಡಬೇಕು. ಈ ಮೊದಲಿನ ಸರ್ಕಾರ ಜಾರಿಗೆ ತಂದ ಕೃಷಿ ಕಾನೂನುಗಳನ್ನು ವಾಪಸ್ ಪಡೆಯಬೇಕು.

ರೈತರ ಜಮೀನಿನ ಪಹಣಿ ಪತ್ರಿಕೆ ಪಡೆಯಲು ಈಗ 25 ರೂಪಾಯಿಗಳನ್ನು ಮಾಡಿದ್ದು, ಅದನ್ನು ಹಿಂದಿನಂತೆ ರೂ.10 ಗಳಿಗೆ ಇಳಿಸಬೇಕು ಎಂದು ಹೇಳಿದರು.

ಇಳಕಲ್ಲ ತಾಲೂಕು ಅಧ್ಯಕ್ಷ ಮೊಹಸೀನ್ ನದಾಫ್, ಹುನಗುಂದ ತಾಲೂಕು ಅಧ್ಯಕ್ಷ ಬಸನಗೌಡ ಪೈಲ್, ಸದಸ್ಯರಾದ ಎಂ.ಆರ್.ಪಾಟೀಲ, ರಸೂಲ್‌ಸಾಬ್ ತಹಸೀಲ್ದಾರ್, ಮಾಲಿಂಗಪ್ಪ ಅವಾರಿ, ಬಸವರಾಜ ಹುಡೇದಮನಿ, ಬಸನಗೌಡ ಪಾಟೀಲ, ಅಜಯಕುಮಾರ ಹಾಲಗಂಗಾಧರಮಠ, ಮುತ್ತುರಾಜ ಕರಡಿ, ಉಸ್ಮಾನಾಬ ಹುಣಚಗಿ, ಹನುಮಂತಪ್ಪ ತೊಪಲಕಟ್ಟಿ, ವೆಂಕಣ್ಣ ತೆಗ್ಗಿಮನೆ, ರಾಜಮಹ್ಮದ ನದಾಫ್, ವಿಷ್ಣು ರಜಪೂತ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net