

ಕಲಘಟಗಿ: ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಬಿಜೆಪಿ ರೈತ ಮೋರ್ಚಾವತಿಯಿಂದ ಶುಕ್ರವಾರ ಪಟ್ಟಣದಲ್ಲಿ ಬಾರಕೋಲು ಪ್ರದರ್ಶಿಸಿ ಪ್ರತಿಭಟನೆ ನಡೆಸಲಾಯಿತು.
ಕಲಘಟಗಿಯಲ್ಲಿ ಈ ಭಾರಿ ವಾಡಿಕೆಗಿಂತ ಶೇ. 40ಕಡಿಮೆ ಮಳೆ ಆಗಿರುವದರಿಂದ ಕೃಷಿ ಚಟುವಟಿಕೆಗಳು ಹಿನ್ನಡೆ ಕಂಡಿವೆ. ಬೆಳೆಗಳು ಒಣಗಿ ಹೋಗಿರುವುದರಿಂದ ಜಾನುವಾರುಗಳಿಗೆ ಮೇವು, ಆಹಾರ ಇಲ್ಲದಂತ ಸ್ಥಿತಿ ನಿರ್ವಣವಾಗಿದೆ. ಇದೆಲ್ಲವನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಕೂಡಲೇ ಪ್ರತಿ ಹೆಕ್ಟೇರ್ಗೆ ರೂ. 50 ಸಾವಿರ ರೂ ಪರಿಹಾರವನ್ನು ಘೊಷಣೆ ಮಾಡಬೇಕು.
ಗ್ರಾಮೀಣ ಭಾಗದ ಹೊಲಗಳಿಗೆ ಹೋಗಲು ನಮ್ಮ ಹೊಲ ನಮ್ಮ ರಸ್ತೆ ಯೋಜನೆಯಡಿ ಅನುದಾನ ನೀಡಬೇಕು. ಲೋಡ್ಶೆಡ್ಡಿಂಗ್ ನಿಲ್ಲಿಸಬೇಕು, ಕಲಘಟಗಿ ತಾಲೂಕನ್ನು ಬರಗಾಲ ಪೀಡಿತ ಪ್ರದೇಶ ಎಂದು ರಾಜ್ಯ ಸರ್ಕಾರ ಘೊಷಣೆ ಮಾಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಶಶಿಧರ ನಿಂಬಣ್ಣವರ, ನಿಂಗಪ್ಪ ಸುತಗಟ್ಟಿ, ಬಸವರಾಜ ಶೇರೆವಾಡ, ಫಕಿರೇಶ ನೆಸರೇಕರ, ಸದಾನಂದ ಚಿತಾಮಣಿ, ಐ.ಸಿ.ಗೋಕುಲ, ಗೀತಾ ಮರಲಿಂಗಣವರ, ಚಂದ್ರಗೌಡ .ಕೆ.ಪಾಟೀಲ, ಅಣ್ಣಪ್ಪ ಓಲೇಕಾರ, ಶಶಿಧರ ಹುಲ್ಲಿಕಟ್ಟಿ, ಎಸ್.ಎನ್.ಬೀದರಳ್ಳಿ, ಮಂಗಲಪ್ಪ ಲಮಾಣಿ, ಸುರೇಶ ಶೀಲವಂತರ, ವಜ್ರಕುಮಾರ ಮಾದನಬಾವಿ, ಬಸವರಾಜ ಹೋನ್ನಿಹಳ್ಳಿ, ಗುರುನಾಥಗೌಡ ಪಾಟೀಲ, ಪುಂಡಲಿಕ ಜಾದವ, ಅರ್ಜುನ ಲಮಾಣಿ, ಸಂತೋಷ ಮಾದನಬಾವಿ, ಸೋಮು ಕೊಪ್ಪದ, ಪರಶುರಾಮ ಹುಲಿಹೊಂಡ, ರಾಘವೇಂದ್ರ ಹುಲಿಹೊಂಡ, ಶಿವಯ್ಯ ಶಿಂದೋಗಿಮಠ, ಗುರುನಾಥ ದಾನಾವೇನವರ, ರುದ್ರಯ್ಯ ಚಿಕ್ಕಮಠ, ಪುಂಡಲೀಕ ಜಾದವ್, ಸೇರಿದಂತೆ ಬಿಜೆಪಿ ಕಾರ್ಯಕರ್ತರು ತಾಲೂಕಿನ ರೈತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.