

ಸೊರಬ: ತಾಲೂಕನ್ನು ಬರಪೀಡಿತ ಪ್ರದೇಶ ಎಂದು ಘೋಷಣೆ ಮಾಡುವಂತೆ ಒತ್ತಾಯಿಸಿ ತಾಲೂಕ ಶ್ರೀ ನಾರಾಯಣಗುರು ವಿಚಾರ ವೇದಿಕೆ ಪದಾಧಿಕಾರಿಗಳು ಮಂಗಳವಾರ ತಹಸೀಲ್ದಾರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಪ್ರಸಕ್ತ ಸಾಲಿನಲ್ಲಿ ಮಳೆ ಕೊರತೆಯಿಂದ ಭತ್ತ, ಶುಂಠಿ, ಮೆಕ್ಕೆಜೋಳ, ಅಡಕೆ, ಬಾಳೆ ಸೇರಿದಂತೆ ಮುಂತಾದ ಬೆಳೆಗಳು ಸಂಪೂರ್ಣ ಹಾನಿಗೊಳಗಾಗಿದ್ದು, ರೈತರು ಕಂಗಾಲಾಗಿದ್ದಾರೆ. ಸಂಕಷ್ಟದಲ್ಲಿ ಸಿಲುಕಿರುವ ರೈತರಿಗೆ ಸರ್ಕಾರ ಕೂಡಕೇ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು.
ವೇದಿಕೆಯ ಜಿಲ್ಲಾಧ್ಯಕ್ಷ ಪ್ರವೀಣ್ ಹಿರೇಇಡಗೋಡು, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಶಿವಕುಮಾರ್ ಬಿಳವಗೋಡು, ತಾಲೂಕು ಅಧ್ಯಕ್ಷ ರಜನಿ ನಾಯ್ಕ, ಉಪಾಧ್ಯಕ್ಷ ಹೇಮಣ್ಣ ದೇವತಿಕೊಪ್ಪ, ಕೇಶವಣ್ಣ ಯಡಗೋಪ್ಪ, ಪದಾಧಿಕಾರಿಗಳಾದ ಎಚ್.ಧರ್ಮಪ್ಪ, ಗಣಪತಿ, ಜೆ.ಕೆ.ಹೂಳಿಯಪ್ಪ, ಮಂಜಪ್ಪ, ಎಂ.ಆರ್.ದೇವರಾಜ್, ರಾಜ್‌ಕುಮಾರ್, ಬೆನಕಪ್ಪ, ಸುರೇಶ್, ಚಂದ್ರಪ್ಪ ಇತರರಿದ್ದರು.