

ಇಂಡಿ: ಇಂಡಿಯನ್ನು ಜಿಲ್ಲೆಯಾಗಿ ಘೋಷಿಸಬೇಕು ಎಂದು ಆಗ್ರಹಿಸಿ ಗುರುವಾರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಪ್ರತಿಭಟನೆ ನಡೆಸಿ ಉಪವಿಭಾಗಾಧಿಕಾರಿ ಅಬೀದ್ ಗದ್ಯಾಳ ಅವರಿಗೆ ಮನವಿ ಸಲ್ಲಿಸಲಾಯಿತು.
ಪತ್ರಕರ್ತರಾದ ಅಬುಶಾಮ ಹವಾಲ್ದಾರ್, ರಾಜಕುಮಾರ ಚಾಬುಕಸವಾರ, ಶಂಕರಲಿಂಗ ಜಮಾದಾರ ಮಾತನಾಡಿ, 1996ರಲ್ಲಿ ಜೆ.ಎಚ್. ಪಟೇಲ ಮುಖ್ಯಮಂತ್ರಿಗಳಿದ್ದಾಗ ವಿಜಯಪುರ ಜಿಲ್ಲೆಯನ್ನು ವಿಭಜಿಸಿ ಬಾಗಲಕೋಟೆ ಜಿಲ್ಲೆಯನ್ನಾಗಿ ಮಾಡಿದರು. ಈಗ ಅದೇ ಮಾದರಿಯಲ್ಲಿ ಸಿದ್ದರಾಮಯ್ಯನವರು ಇಂಡಿ ಜಿಲ್ಲೆಯನ್ನು ಮಾಡಬೇಕು ಎಂದರು.
ಪತ್ರಕರ್ತರಾದ ಉಮೇಶ ಬಳಬಟ್ಟಿ, ಯಲಗೊಂಡ ಬೇವನೂರ, ಲಕ್ಷಣ ಹಿರೇಕುರಬರ, ಲಾಲಸಿಂಗ್ ರಾಠೋಡ, ನಾಗರಾಜ ಆಸಂಗಿ, ಅಲ್ಲಾಭಕ್ಷ ಗೋರೆ, ಅರವಿಂದ ಖಡೆಖಡೆ, ಸದ್ದಾಂಹುಸೇನ ಜಮಾದಾರ, ಅಂಬಣ್ಣ ರಾಂಪೂರ, ಜಹಾಂಗೀರಬಾಷಾ ದೇಸಾಯಿ, ಪ್ರವೀಣ ಮಠ ಮತ್ತಿತರರಿದ್ದರು.