ಬರ ಪರಿಹಾರ ನೀಡಲು ಒತ್ತಾಯ

DECLARE DROUGHT SOLUTION PROTEST LABORS
ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಜಿಲ್ಲಾ ಸಮಿತಿ ಪದಾಧಿಕಾರಿಗಳು ಮಂಗಳವಾರ ಕೊಪ್ಪಳದಲ್ಲಿ ಪ್ರತಿಭಟನೆ ನಡೆಸಿದರು. ಪ್ರತಿಭಟನಕಾರರಾದ ಬಸವರಾಜ ಮರಕುಂಬಿ, ಸುಂಕಪ್ಪ ಗದಗ, ಹುಸೇನಪ್ಪ ಎಚ್.ಕೆ., ಗಂಗಾಧರ ಸ್ವಾಮಿ, ಮರಿ ನಾಗಪ್ಪ ಡಗ್ಗಿ, ದುರುಗೇಶ ಮರಕುಂಬಿ ಇದ್ದರು.
Published on

ಕೊಪ್ಪಳ: ಮಳೆಯಾದಗ ಕಾರಣ ಬರಗಾಲ ಆವರಿಸಿದೆ. ತಕ್ಷಣ ಸರ್ಕಾರ ಪರಿಹಾರ ಚಟುವಟಿಕೆ ಆರಂಭಿಸುವಂತೆ

ಒತ್ತಾಯಿಸಿ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಜಿಲ್ಲಾ ಸಮಿತಿ ಪದಾಧಿಕಾರಿಗಳು ಮಂಗಳವಾರ ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು.

ರಾಜ್ಯದಲ್ಲಿ ಬರ ಆವರಿಸಿದೆ. ಸರ್ಕಾರವೂ ಬರ ಪೀಡಿತ ತಾಲೂಕುಗಳ ಪಟ್ಟಿ ಬಿಡುಗಡೆ ಮಾಡಿದೆ. ಆದರೆ, ಪರಿಹಾರ ಚಟುವಟಿಕೆಗಳನ್ನು ಆರಂಭಿಸಿಲ್ಲ. ಬೆಳೆನಷ್ಟವಾಗಿದ್ದು ರೈತರು ಸಂಕಷ್ಟದಲ್ಲಿದ್ದಾರೆ.

ಮುಂದಿನ ದಿನಗಳಲ್ಲಿ ಕುಡಿವ ನೀರು, ಜಾನುವಾರುಗಳಿಗೆ ಮೇವಿನ ಕೊರತೆ ಎದುರಾಗುವ ಸಾಧ್ಯತೆ ಇದೆ.

ಕೂಲಿ ಕಾರ್ಮಿಕರು ಕೆಲಸ ಅರಸಿ ಗುಳೆ ಹೋಗುವ ಸ್ಥಿತಿ ಇದೆ ಎಂದು ಅಳಲು ತೋಡಿಕೊಂಡರು.

ನರೇಗಾ ಕೆಲಸವನ್ನು 200 ದಿನಕ್ಕೆ ಹೆಚ್ಚಿಸಬೇಕು. ದಿನಗೂಲಿ ಮೊತ್ತ 600ರೂ.ಗೆ ಹೆಚ್ಚಳ ಮಾಡಿ. ರೈತರ ಕೃಷಿ ಸಾಲ ಕಟ್ಟುವಂತೆ ಒತ್ತಾಯ ಮಾಡಬಾರದು.

ಮೈಕ್ರೋ ಪೈನಾನ್ಸ್‌ಗಳಲ್ಲಿ ಪಡೆದ ಸಾಲ ಮನ್ನಾ ಮಾಡಬೇಕು. ಅನುಕೂಲಸ್ಥ ರೈತರು ಕೃಷಿ ಕೂಲಿಕಾರರಿಗೆ ಕಾರ್ಮಿಕ ಇಲಾಖೆ ನಿಗದಿಪಡಿಸಿದ ಕನಿಷ್ಠ ಕೂಲಿ ನೀಡಬೇಕು.

ನರೇಗಾ ಕೂಲಿಕಾರರಿಗೆ ಕೆಲಸ ಕೊರತೆಯಾಗದಂತೆ ಕ್ರಮವಹಿಸಬೇಕು. ಕೂಲಿಕಾರರ ಸಭೆ ಕರೆದು ಸಮಸ್ಯೆ ಆಲಿಸಿ ಪರಿಹಾರ ಒದಗಿಸಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನಕಾರರಾದ ಬಸವರಾಜ ಮರಕುಂಬಿ, ಸುಂಕಪ್ಪ ಗದಗ, ಹುಸೇನಪ್ಪ ಎಚ್.ಕೆ.,

ಗಂಗಾಧರ ಸ್ವಾಮಿ, ಮರಿ ನಾಗಪ್ಪ ಡಗ್ಗಿ, ದುರುಗೇಶ ಮರಕುಂಬಿ, ರಮೇಶ, ರೇಣುಕಮ್ಮ ಗಬ್ಬೂರ, ಬಸವರಾಜ ಮೇಳಿ, ಬಾಳಪ್ಪ ಹುಲಿಹೈದರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net