ಆಹಾರ ಭದ್ರತಾ ವಲಯ ಘೋಷಿಸಿ

04 09 2025_BGR_RURAL_PAGE_5A
ಹಂದೇನಹಳ್ಳಿಯ ಭೂಸ್ವಾಧಿನ ವಿರುದ್ಧ ಹೋರಾಟದ ಸ್ಥಳದಲ್ಲಿ ರೈತ ಸಮಲೋಚನಾ ಸಭೆ ನಡೆಯಿತು. ಕೃಷಿ ಬೆಲೆ ಆಯೋಗದ ಮಾಜಿ ಅಧ್ಯ ಡಾ.ಟಿ.ಎನ್​.ಪ್ರಕಾಶ್​ ಕಮ್ಮರಡಿ,ಕೃಷಿ ವಿಜ್ಙಾನಿಗಳಾದ ತೇಜಶ್ವಿನಿ, ಡಾ.ನಾರಾಯಣಸ್ವಾಮಿ, ಕೃಷ್ಣೇಗೌಡ, ರೈತ ಹೋರಾಟಗಾರ ಯಶವಂತ್​ ಇತರರು ಇದ್ದರು.
Published on

ಸರ್ಜಾಪುರ : ಆನೇಕಲ್​ ತಾಲೂಕಿನ ಸರ್ಜಾಪುರ ಹೋಬಳಿಯಲ್ಲಿ ಭೂಸ್ವಾಧಿನ ವಿರೋಧಿಸಿ ಮುತ್ತಾನಲ್ಲೂರು ಮತ್ತು ಹಂದೇನಹಳ್ಳಿಯಲ್ಲಿ ಕೈಗೊಂಡಿರುವ ಅರ್ನಿದಿಷ್ಟಾವಧಿ ಧರಣಿ ಸತ್ಯಾಗ್ರಹ ಸ್ಥಳ ಮತ್ತು ಭೂ ಸ್ವಾಧಿನಕ್ಕೆ ಒಳಪಟ್ಟಿರುವ ಜಮೀನುಗಳಿಗೆ ಬುಧವಾರ ಕೃಷಿ ತರು ಮತ್ತು ವಿಾನಿಗಳು ಹಾಗೂ ಚಿಂತಕರು ಭೇಟಿ ನೀಡಿ ರೈತರೊಂದಿಗೆ ಸಮಲೋಚನೆ ನಡೆಸಿದರು. ಹಣದ ವ್ಯಾಮೋಹ ಮತ್ತು ಹಣದ ಹುಚ್ಚಿಗೆ ಬಲಿಯಾಗಿರುವ ಜನಪ್ರತಿನಿಧಿಗಳು ಫಲವತ್ತಾದಂತಹ ಭೂಮಿಗಳನ್ನು ಆಕ್ರಮವಾಗಿ ಭೂಸ್ವಾಧಿನ ಪಡಿಸಿಕೊಳ್ಳುತ್ತಿರುವುದು ಹೇಯ ಕೃತ್ಯವಾಗಿದೆ ಎಂದು ಕೃಷಿ ಬೆಲೆ ಆಯೋಗದ ಮಾಜಿ ಅಧ್ಯ ಡಾ.ಟಿ.ಎನ್​.ಪ್ರಕಾಶ್​ ಕಮ್ಮರಡಿ ಹೇಳಿದರು.

ಆನೇಕಲ್​ ತಾಲೂಕಿನಲ್ಲಿ ಬೆಳೆಯುವಂತಹ ತರಕಾರಿ ಹಣ್ಣು, ಹಂಪಲು ಮತ್ತು ಬಹುತೇಕವಾಗಿ ಬೆಂಗಳೂರಿನ ಜನರು ಕುಡಿಯುವಂತಹ ಹಾಲನ್ನೂ ಈ ಭಾಗದ ರೈತರು ಕೃಷಿ ಮಾಡಿ ಬೆಂಗಳೂರಿನಂತಹ ಮಹಾನಗರಕ್ಕೆ ನೀಡುತ್ತಿದ್ದಾರೆ. ಇಲ್ಲಿಂದ ಪೂರೈಕೆಯಾಗುವ ಹಾಲು ಕುಡಿಯುವ ಪ್ರತಿಯೊಬ್ಬರೂ ಮತ್ತು ಬೆಂಗಳೂರಿನ ನಿವಾಸಿಗಳು ರೈತರ ಹೋರಾಟಕ್ಕೆ ನಿಲ್ಲಬೇಕಾಗಿದೆ. ಅಭಿವೃದ್ಧಿಯ ಹೆಸರಿನಲ್ಲಿ ಭೂಸ್ವಾಧಿನವಾದರೆ ನಗರದ ಜನರು ಸೇವಿಸುವಂತಹ ಹಣ್ಣು, ತರಕಾರಿ ಮತ್ತು ಹಾಲು ಎಲ್ಲಿಂದ ಉತ್ಪಾದಿಸಲಾಗುತ್ತದೆ ಎಂದು ಪ್ರಶ್ನೆ ಮಾಡಿದರು. ಸರ್ಕಾರಗಳು ಸಮಗ್ರವಾದ ಭೂ ಸ್ವಾಧಿನ ನೀತಿ ರೂಪಿಸಬೇಕು ಮತ್ತು ನೀರಾವರಿ ಭೂಮಿ ಮತ್ತು ಫಲವತ್ತಾದ ಭೂಮಿಗಳನ್ನು ಸ್ವಾಧಿನಪಡಿಸಿಕೊಳ್ಳದೆ ಆಹಾರ ಭದ್ರತಾ ವಲಯ ಎಂದು ೂಷಿಸಬೇಕು ಎಂದು ಒತ್ತಾಯ ಮಾಡಿದರು.

ತಾಲೂಕು ಭೂ ಸ್ವಾಧಿನ ವಿರೋಧಿ ಹೋರಾಟ ಸಮಿತಿ ಗೌರವಾಧ್ಯ ಕೆ.ವಿಶ್ವನಾಥ್​ ರೆಡ್ಡಿ, ಪದಾಧಿಕಾರಿಗಳಾದ ಚಂದ್ರರೆಡ್ಡಿ, ಡಾ.ಚಿನ್ನಪ್ಪ ವೈ ಚಿಕ್ಕಹಾಗಡೆ, ಕೆ.ಸಿ.ದೇವರಾಜು, ಮಧುಸೂದನ್​ರೆಡ್ಡಿ, ಎಸ್​.ವಿ.ಎಸ್​.ಮಧುಸೂದನ್​, ಆನೇಕಲ್​ ತಾಲೂಕು ಹಸಿರು ಮನೆ ಬೆಳೆಗಾರರ ಕ್ಷೇಮಾಭಿವೃದ್ಧಿ ಸಂದ ಅಧ್ಯ ಸೋಮಶೇಖರ್​ ಇದ್ದರು.

2ನೇ ಸ್ವಾತಂತ್ರ್ಯ ಹೋರಾಟ ಪ್ರಾರಂಭ : ಕೃಷಿ ಯೋಗ್ಯ ಭೂಮಿಗಳನ್ನು ಕೃಷಿಗೇ ಮೀಸಲಿಡಬೇಕು ಎಂಬ ನಿಯಮವಿದ್ದರೂ ಸರ್ಕಾರಗಳಿಗೆ ಸಾಮಾನ್ಯ ತಿಳಿವಳಿಕೆ ಇಲ್ಲದಂತಾಗಿದೆ. ಹಾಗಾಗಿ ಈ ರೀತಿ ತೀರ್ಮಾನ ತೆಗೆದುಕೊಂಡಿದ್ದಾರೆ. ಕೈಗಾರಿಕೆಗಳು ದೇಶದ ಪ್ರಗತಿಗೆ ಬೇಕಾಗಿದ್ದರೂ ಬಂಜರು ಭೂಮಿಗಳಲ್ಲಿ ಕೈಗಾರಿಕೆಗಳನ್ನು ತಂದು ಅಲ್ಲಿನ ಜನರ ಜೀವನ ಮಟ್ಟ ಉತ್ತಮಗೊಳಿಸಬೇಕು. ಬದಲಾಗಿ ಫಲವತ್ತಾದ ಕೃಷಿ ಭೂಮಿಗಳಿಂದಲ್ಲ ಎಂದು ಜಿಕೆವಿಕೆ ಕೃಷಿ ವಿಶ್ವವಿದ್ಯಾಲಯದ ನಿಕಟಪೂರ್ವ ಉಪ ಕುಲಪತಿ ಡಾ.ನಾರಾಯಣಗೌಡ ಹೇಳಿದರು. ರೈತರ ಮೇಲೆ ನಿರಂತರ ಶೋಷಣೆಗಳು ಮುಂದುವರಿದರೆ ಎರಡನೇ ಸ್ವಾತಂತ್ರ$್ಯ ಹೋರಾಟ ಪ್ರಾರಂಭವಾಗುತ್ತದೆ ಎಂದು ಭವಿಷ್ಯ ನುಡಿದರು.

ಕೃಷಿ ಉತ್ತೇಜನಕ್ಕೆ ಅರ್ಥವೇ ಇಲ್ಲ : ಸರ್ಕಾರಗಳೇ ಭೂಮಿಗಳಿಗೆ ವಿವಿಧ ಯೋಜನೆಗಳ ಮೂಲಕ ಸಬ್ಸಿಡಿ, ಪೋತ್ಸಾಹ ಧನ ಅಥವಾ ಸಹಾಯಧನ ನೀಡಿ ಕೃಷಿಗೆ ಉತ್ತೇಜನ ನೀಡಿ ಈಗ ಮರಳಿ ಭೂಮಿಗಳು ಬಂಜರು ಭೂಮಿಯೆಂದು ದಾಖಲೆಗಳಲ್ಲಿ ತೋರಿಸಿ ನಮ್ಮ ಭೂಮಿಗಳನ್ನು ಸ್ವಾಧಿನ ಪಡಿಸಿಕೊಳ್ಳುವುದು ಎಷ್ಟು ಸರಿ?. ಈ ಭಾಗದಲ್ಲಿ ಕೈಗಾರಿಕೆಗಳು ಬಂದರೆ ನಮ್ಮ ಜೀವನವನ್ನು ಕಂಡುಕೊಳ್ಳುವದಾದರೂ ಹೇಗೆ ? ಪ್ರಾಣ ಬೇಕಾದರೂ ಕೊಟ್ಟೆವು. ಆದರೆ ಭೂಮಿಯನ್ನು ಕೊಡಲ್ಲ. ಭೂಮಿಯನ್ನು ಮುಂದಿನ ಪೀಳಿಗೆಗೆ ನೀಡುತ್ತೇವೆ ಎಂದು ಯುವ ಮಹಿಳಾ ರೈತ ಹೋರಾಟಗಾರ್ತಿ ಮನುಜಾ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net