

ಅಳವಂಡಿ: ಮಕ್ಕಳಲ್ಲಿನ ಪ್ರತಿಭೆ ಅನಾವರಣಕ್ಕೆ ಕಾರಂಜಿ ಉತ್ತಮ ವೇದಿಕೆ ಎಂದು ನಿವೃತ್ತ ಮುಖ್ಯ ಶಿಕ್ಷಕ ಮೋತೆಪ್ಪ ಪೂಜಾರ ಹೇಳಿದರು.
ಇದನ್ನೂ ಓದಿ: ಗ್ರಾಮೀಣ ಪ್ರತಿಭೆಗಳನ್ನು ಗುರುತಿಸುವ ಪ್ರಯತ್ನವಾಗಲಿ
ಸಮೀಪದ ಹೈದರನಗರದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿ, ಕ್ಷೇತ್ರ ಸಮನ್ವಯಾಧಿಕಾರಿ ಕಚೇರಿಯಿಂದ ಹಮ್ಮಿಕೊಂಡಿದ್ದ ಕವಲೂರು ಪ್ರಾಥಮಿಕ-ಪ್ರೌಢಶಾಲೆಗಳ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮದಲ್ಲಿ ಸೋಮವಾರ ಮಾತನಾಡಿದರು.
ನಿರ್ಣಾಯಕರು ಪ್ರತಿಭೆಗೆ ಪ್ರೋತ್ಸಾಹ ನೀಡುವ ಜತೆಗೆ ಪ್ರತಿಭೆಗೆ ನ್ಯಾಯ ಒದಗಿಸಬೇಕು. ಇಂತಹ ವೇದಿಕೆಗಳನ್ನು ಮಕ್ಕಳು ಚನ್ನಾಗಿ ಬಳಸಿಕೊಂಡು ಪ್ರತಿಭೆ ಅನಾವರಣ ಮಾಡಬೇಕು ಎಂದರು.
ಕವಲೂರು ಸಿಆರ್‌ಪಿ ವೀರೇಶ ಕೌಟಿ ಮಾತನಾಡಿ, ಕೆಲವು ಮಕ್ಕಳು ಓದು ಬರಹದಲ್ಲಿ ಮುಂದೆ ಇರುತ್ತಾರೆ. ಇನ್ನೂ ಕೆಲವರು ಸಾಂಸ್ಕೃತಿಕ, ಜಾನಪದ, ಕ್ರೀಡೆ, ಸಂಗೀತ, ಭಾಷಣ ಮುಂತಾದ ಸ್ಪರ್ಧೆಗಳಲ್ಲಿ ಪ್ರತಿಭೆ ಹೊಂದಿರುತ್ತಾರೆ. ಇವರನ್ನು ಗುರುತಿಸಿ ಹೋರತರುವ ಕೆಲಸವಾಗಬೇಕು ಎಂದರು.
ಮುಖ್ಯಶಿಕ್ಷಕ ಹನುಮಂತಪ್ಪ, ಬಿಆರ್‌ಪಿಗಳಾದ ಹನುಮರಡ್ಡಿ, ಕನಕಪ್ಪ, ಮಂಜುನಾಥ, ಸಿಆರ್‌ಪಿಗಳಾದ ರೇವಣಸಿದ್ದಪ್ಪ, ವಿಜಯಕುಮಾರ, ಸುರೇಶ ಕಂಬಳಿ, ಪ್ರಮುಖರಾದ ರೇಖಪ್ಪ ನಾಯಕ, ಕಾಳಪ್ಪ ನಾಯಕ, ಮಲ್ಲಿಕಾರ್ಜುನ ಬಡಿಗೇರ, ಶೇಖರಪ್ಪ ಪೂಜಾರ, ಪೋಮೆಪ್ಪ, ಚಂದಪ್ಪ, ಶಿವನಾಗಪ್ಪ, ಹೂವಪ್ಪ, ಮಂಜುನಾಥ, ಚನ್ನಪ್ಪ, ರವಿ, ವಿರೂಪಾಕ್ಷಿ ಬಡಿಗೇರ, ಶರಣಪ್ಪ, ಹನುಮಂತ, ಪರಮೇಶಪ್ಪ ಇತರರಿದ್ದರು.