ಬಿಜೆಪಿ ಬೆಂಬಲಿಸಲು ನಿರ್ಧಾರ

Is the base of BJP shaking
Published on

ಮೈಸೂರು: ಮೈಸೂರು-ಕೊಡಗು ಹಾಗೂ ಚಾಮರಾಜನಗರ ಕ್ಷೇತ್ರದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಬೆಂಬಲಿಸಲು ನಿರ್ಧರಿಸಿದ್ದೇವೆ ಎಂದು ಜಿಲ್ಲಾ ವಿಶ್ವಕರ್ಮ ಸಾಮಾಜಿಕ ನ್ಯಾಯ ಸಮನ್ವಯ ಸಮಿತಿ ಮುಖಂಡ ಹುಯಿಲಾಳು ಕುಮಾರ್ ತಿಳಿಸಿದರು.

ರಾಜ್ಯದಲ್ಲಿ 40 ಲಕ್ಷಕ್ಕೂ ಹೆಚ್ಚು ಮತದಾರರನ್ನು ವಿಶ್ವಕರ್ಮ ಸಮಾಜ ಹೊಂದಿದೆ. ಆದರೂ ಕಾಂಗ್ರೆಸ್ ಪಕ್ಷದಿಂದ ಉತ್ತಮ ಪ್ರಾತಿನಿಧ್ಯ ದೊರೆತಿಲ್ಲ.

ಸಮುದಾಯದ ಪ್ರಮುಖರಾದ ಕೆ.ಪಿ.ನಂಜುಂಡಿ ಅವರನ್ನು ಅಂತಿಮವಾಗಿ ಬಿಜೆಪಿಯಿಂದ ಎಂಎಲ್ಸಿ ಮಾಡಲಾಯಿತು. ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಮುದಾಯದ ಮೇಲೆ ಅಪಾರ ಗೌರವವಿದ್ದು ಪಿಎಂ-ವಿಶ್ವಕರ್ಮ ಯೋಜನೆ ನೀಡಿದ್ದಾರೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net