ಭೋಜಾ ದರ ಕಡಿತಕ್ಕೆ ನಿರ್ಣಯ

Decision to reduce food price
ಕಮತಗಿ ಪಟ್ಟಣ ಪಂಚಾಯತ ಕಾರ್ಯಾಲಯದಲ್ಲಿ ಗುರುವಾರ ನಡೆದ ಸಭೆಯಲ್ಲಿ ಅಧ್ಯಕ್ಷ ರಮೇಶ ಜಮಖಂಡಿ, ಮುಖ್ಯಾಧಿಕಾರಿ ಎ್.ಎನ್. ಹುಲ್ಲಿಕೇರಿ, ಇಂಜನಿಯರ್ ಖಾಜಿ, ಸದಸ್ಯ ದೇವಿಪ್ರಸಾದ ನಿಂಬಲಗುಂದಿ, ರಮೇಶ ಪದಕಿ ಇದ್ದರು.
Published on

ಕಮತಗಿ: ಸಾರ್ವಜನಿಕರು ತಮ್ಮ ಆಸ್ತಿಗಳ ಮೇಲೆ ಸಾಲ ಪಡೆಯಲು ಒಂದು ಲಕ್ಷ ರೂ. ಸಾಲಕ್ಕೆ ಒಂದು ಸಾವಿರ ರೂ. ಇದ್ದ ಭೋಜಾ ದರವನ್ನು ಇನ್ನು ಮುಂದೆ 10 ಲಕ್ಷದ ವರೆಗೆ 600 ರೂ.ಗೆ ಕಡಿಮೆಗೊಳಿಸಿ ಪಟ್ಟಣ ಪಂಚಾಯತ ಸಾಮಾನ್ಯ ಸಭೆಯಲ್ಲಿ ತಿರ್ಮಾನ ಕೈಗೊಳ್ಳಲಾಗಿದೆ.

ಸ್ಥಳೀಯ ಪಟ್ಟಣ ಪಂಚಾಯತ ಕಾರ್ಯಾಲಯದಲ್ಲಿ ಪ.ಪಂ. ಅಧ್ಯಕ್ಷ ರಮೇಶ ಎಸ್. ಜಮಖಂಡಿ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಮೊದಲ ಸಾಮಾನ್ಯ ಸಭೆಯಲ್ಲಿ ಈ ಬಗ್ಗೆ ಪ್ರಸ್ತಾಪಿಸಿದ ಸದಸ್ಯರಾದ ಬಸವರಾಜ ಕುಂಬಳಾವತಿ, ಲಕ್ಷತ್ಮಣ ಮಾದರ, ಪ್ರಭು ಯತ್ತಿನಮನಿ, ಗುರು ಪಾಟೀಲ ಅವರು, ಭೋಜಾ ದರವನ್ನು ಸಾರ್ವಜನಿಕರಿಗೆ ತೀವ್ರ ತೊಂದರೆಯಾಗುತ್ತಿದ್ದು, ಇದನ್ನು ಶೇ. 50ರಷ್ಟು ಕಡಿಮೆ ಮಾಡಬೇಕು ಎಂದು ಮನವಿ ಮಾಡಿದಾಗ ಅಧ್ಯಕ್ಷ ರಮೇಶ ಜಮಖಂಡಿ ಅವರು ಒಂದು ಲಕ್ಷಕ್ಕೆ ಇದ್ದ ಒಂದು ಸಾವಿರ ಬದಲಿಗೆ 600 ರೂ. ಗಳನ್ನು ನಿಗದಿ ಮಾಡೋಣ ಎಂದಾಗ ಬಹುತೇಕ ಸದಸ್ಯರು ಒಪ್ಪಿಗೆ ಸೂಚಿಸಿದರು.

ಶುದ್ದ ಕುಡಿಯುವ ನೀರಿನ ಘಟಕಕ್ಕೆ ಬಾಡಿಗೆ ರೂಪದಲ್ಲಿ ನಿವೇಶನ ನೀಡಿರುವ ಶಿವಾಚಾರ ಹಟಗಾರ ಸಮಾಜಕ್ಕೆ ಪ್ರತಿ ತಿಂಗಳು 3 ಸಾವಿರ ರೂ. ಗಳನ್ನು ನೀಡಲು ನಿರ್ಣಯಿಸಲಾಯಿತು. 2024-25ನೇ ಸಾಲಿನ ಎಸ್‌ಎ್ಸಿ ಮತ್ತು ಸ್ಥಳೀಯ ನಿಧಿಯ ಶೇ. 24.10, 7.25 ಹಾಗೂ ಶೇ. 5ರ ಯೋಜನೆಯ ಲಾನುಭವಿಗಳನ್ನು ಆಯ್ಕೆ ಮಾಡಲು ಹಾಗೂ ಎಸ್‌ಎ್ಸಿ, 15ನೇ ಹಣಕಾಸು ಮತ್ತು ಎಸ್‌ಡಬ್ಲೂತ್ಯಎಂ ಡಿಪಿಆರ್ ಯೋಜನೆಯ ಅಡಿಯಲ್ಲಿ ವಿವಿಧ ಅಭಿವದ್ಧಿ ಕಾಮಗಾರಿಗಳನ್ನು ನಿರ್ವಹಣೆ ಮಾಡಲು ಬಂದ ಗುತ್ತಿಗೆದಾರರ ಟೆಂಡರ್ ದರಕ್ಕೆ ಅನುಮೋದನೆ ನೀಡಲಾಯಿತು.

ಪಟ್ಟಣದಲ್ಲಿ ಕೈಗೊಂಡಿರುವ 24*7 ಕುಡಿಯುವ ನೀರು ಸರಬರಾಜು ಕಾಮಗಾರಿ ಇನ್ನಷ್ಟು ತೀವ್ರಗತಿಯಲ್ಲಿ ನಡೆದರೆ ಜನರಿಗೆ ಅನುಕೂಲವಾಗಲಿದೆ ಎಂದು ಸದಸ್ಯ ಬಸವರಾಜ ಕುಂಬಳಾವತಿ ಅವರು ಸಭೆಯ ಗಮನ ಸೆಳೆದರು. ಇದಕ್ಕೆ ಉತ್ತರಿಸಿದ ಮುಖ್ಯಾಧಿಕಾರಿ ಎ್.ಎನ್. ಹುಲ್ಲಿಕೇರಿ, ಅಭಿಯಂತರ ಖಾಜಿ ಅವರು ಈ ಯೋಜನೆಯು ನೀರಾವರಿ ಇಲಾಖೆಯಿಂದ ಅನುಷ್ಠಾನಗೊಳ್ಳುತ್ತಿದ್ದು, ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದು ಕಾಮಗಾರಿ ತೀವ್ರಗೊಳ್ಳಲು ಕ್ರಮ ಜರುಗಿಸುತ್ತೇವೆ ಎಂದರು.

ಪಪಂ ಸದಸ್ಯರಾದ ಹುಚ್ಚವ್ವ ಹಗೇದಾಳ, ದೇವಿಪ್ರಸಾದ ನಿಂಬಲಗುಂದಿ, ನಂದಾ ದ್ಯಾಮಣ್ಣವರ, ಸುಮಿತ್ರಾ ಲಮಾಣಿ, ರತ್ನಾ ತಳಗೇರಿ, ಮಂಜುಳಾ ಮುರಾಳ, ಕಸ್ತೂರಿಬಾಯಿ ಬಾಗೇವಾಡಿ, ಸಂಗಪ್ಪ ಗಾಣಿಗೇರ, ಹುಚ್ಚೇಶ ಮದ್ಲಿ, ಚಂದಪ್ಪ ಕುರಿ, ನಾಮನಿರ್ದೇಶಿತ ಸದಸ್ಯರಾದ ಬಸವರಾಜ ದಂಡಾವತಿ, ಸಂಗಪ್ಪ ಮೇದಾರ ಸಭೆಯಲ್ಲಿ ಇದ್ದರು. ಪಪಂ ಸಿಬ್ಬಂದಿಗಳಾದ ರಮೇಶ ಪದಕಿ, ಕನಕಗಿರಿ ಮರ್ಜಿ, ಪ್ರಭು ಹುಲಮನಿಗೌಡರ ಅನೇಕರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net