ಶೀಘ್ರದಲ್ಲಿ 5500 ಶಿಕ್ಷಕರ ನೇಮಕಾತಿಗೆ ತೀರ್ಮಾನ -ಉಸ್ತುವಾರಿ ಸಚಿವ

dr.sharana prakash patil
dr.sharana prakash patil
Published on

ರಾಯಚೂರು ಪರಿಶೀಷ್ಟ ಜಾತಿ ಒಳ ಮೀಸಲಾತಿ ಜಾರಿಗೊಂಡಿದ್ದು, ಶೀಘ್ರದಲ್ಲಿಯೇ 5500 ಶಿಕ್ಷಕರ ನೇಮಕಾತಿ ಪ್ರಕ್ರಿಯೇ ನಡೆಸಲು ತೀರ್ಮಾನ ಮಾಡಲಾಗಿದೆಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣ ಪ್ರಕಾಶ ಪಾಟೀಲ್ ಹೇಳಿದರು.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಖಾಲಿ ಇರುವ ಶಿಕ್ಷಕರ ನೇಮಕಾತಿ ಜತೆಗೆ ವಿವಿಧ ಇಲಾಖೆಗಳ ನೇಮಕಾತಿ ನಡೆಯಲಿವೆ. ಮುಂದಿನ ನವಂಬರ್ ಅಥವಾ ಡಿಸೆಂಬರ್‌ನಲ್ಲಿ ರಾಯಚೂರು ಉತ್ಸವ ನಡೆಸಲು ಉದ್ದೇಶಿಸಲಾಗಿದೆ. ಮುಂಗಾರು ಮಳೆಯಿಂದ ಆಗಿರುವ ಹಾನಿ ಪರಿಹಾರ ಕುರಿತು ಸರ್ಕಾರ ಶೀಘ್ರದಲ್ಲಿ ತೀರ್ಮಾನ ಕೈಗೊಂಡು ರೈತರ ಖಾತೆಗಳಿಗೆ ಪರಿಹಾರ ಹಣ ಪಾವತಿಸಲಾಗುತ್ತದೆ ಎಂದರು.

ಉತ್ತರ ಕರ್ನಾಟಕ ಜಿಲ್ಲೆಗಳ ಜನರ ಆಶಾಕಿರಣ ವಾಗಿರುವ ಕೃಷ್ಣ ಮೇಲ್ದಂಡೆ ಯೋಜನೆಯೆ 75 ಸಾವಿರ ಎಕರೆ ಪ್ರದೇಶ ಸ್ವಾಧೀನ ಪಡಿಸಕೊಳ್ಳಬೇಕಿದೆ. ಹಂತ ಹಂತವಾಗಿ ಭೂಸ್ವಾಧೀನ ಪ್ರಕ್ರಿಯೆ ನಡೆಸಲು ಸರಿ ಸುಮಾರು 75 ಸಾವಿರ ಕೊಟಿ ರೂ. ಅನುದಾನ ಅವಶ್ಯಕತೆಯಿದೆ. ಭೂ ಸ್ವಾದೀನ ಪ್ರಕ್ರೀಯೆ ಕುರಿತು ನೀರಾವರಿ ಪ್ರದೇಶಕ್ಕೆ 40 ಲಕ್ಷ ರೂ. ಹಾಗೂ ಖುಷಿ ಭೂಮಿಗೆ 30 ಲಕ್ಷ ರೂ. ಪರಿಹಾರ ನೀಡಲು ಸರ್ಕಾರ ನಿರ್ಧರಿಸಿದ್ದು, ಪ್ರತ್ಯೇಕ ಪ್ರಾಧಿಕಾರದ ಮೂಲಕ ಭೂ ಪರಿಹಾರ ಕಾರ್ಯನಡೆಸಲು ಉದ್ದೇಶಿಸಲಾಗಿದೆ. ಆರ್ಥಿಕ ಸಂಪನ್ಮೂಲ ಕ್ರೋಢಿಕರಣದ ಕುರಿತು ಹಣಕಾಸು ಇಲಾಖೆ ಯೊಂದಿಗೆ ಮಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿಗಳು ಪ್ರತ್ಯೇಕ ಸಭೆ ನಡೆಸಿ ಆರ್ಥಿಕ ಸಂಪನ್ಮೂಲ ಕ್ರೋಢಿಕರಣದ ಕುರಿತು ಚರ್ಚಿಸಲಿದ್ದಾರೆ.

ಕೃಷ್ಣ ನ್ಯಾಯಾಧೀಕರಣದ ತೀರ್ಪು ಅಧಿಸೂಚನೆ ಹೊರಡಿಸದೇ ಕೇಂದ್ರ ಸರ್ಕಾರ ರಾಜಕೀಯ ಮಾಡುತ್ತಿದೆ ಎಂದು ಆರೋಪಿಸಿದರು.

ಅಲಮಟ್ಟಿ ಜಲಾಶಯದ ಎತ್ತರ ನಮ್ಮ ಹಕ್ಕು. ಯಾರು ಆಕ್ಷೇಪಿಸಿದರೆ ಸಂಬಂಧವಿಲ್ಲ. ನ್ಯಾಯಾಧೀಕರಣ ತೀರ್ಪಿನ ಆಧಾರದಮೇಲೆ ಕೇಂದ್ರ ಬಿಜೆಪಿ ಸರ್ಕಾರ ಅಧಿಸೂಚನೆ ಪ್ರಕಟಿಸಬೇಕು. ಕೇಂದ್ರ ಸರ್ಕಾರ ರಾಜಕಾರಣ ಬಿಟ್ಟು ರಾಜ್ಯಪಾಲಿನ ನೀರಿನ ಹಕ್ಕು ಬಳಸಿಕೊಳ್ಳಲು ಮುಂದಾಗಬೇಕು. ರಾಜ್ಯ ಸರ್ಕಾರ ಬದ್ಧತೆಯಿದೆ ಎಂದರು.

ಕಲ್ಯಾಣ ಕರ್ನಾಟ ಪ್ರದೇಶಕ್ಕೆ ಪ್ರತ್ಯೇಕ ಸಚಿವಾಲಯ ಮಾಡಲು ಸಚಿವ ಸಂಪುಟ ತೀರ್ಮಾನಿಸಿದೆ. ಯೋಜನಾ ಇಲಾಖೆ ವ್ಯಾಪ್ತಿಯಲ್ಲಿಯೇ ಸಚಿವಾಲಯ ಕಾರ್ಯನಿರ್ವಹಿಸಲಿದೆ. ನವಲಿ ಸಮತೋಲನ ಜಲಾಶಯ ನಿರ್ಮಾಣಕ್ಕೆ ಸರ್ಕಾರ ನಿರಂತರ ಪ್ರಯತ್ನದಲ್ಲಿದೆ. ನೆರೆ ರಾಜ್ಯಗಳ ಸಹಮತಿ ಮೇಲೆ ಜಲಾಶಯ ನಿರ್ಮಿಸಬೇಕಿದೆ. ಸರ್ಕಾರ ನೆರೆ ರಾಜ್ಯಗಳ ಸಮ್ಮತಿ ಪಡೆಯುವ ಪ್ರಯತ್ನದಲ್ಲಿದೆ ಎಂದರು.

ಹಿಂದುಳಿದ ವರ್ಗಗಳ ಜಾತಿ ಗಣತಿಯಲ್ಲಿ ವೀರಶೈವ ಲಿಂಗಾಯತ ಗೊಂದಲ ಕುರಿತಂತೆ ಸೆ.21 ರಂದು ಬೆಂಗಳೂರಿನಲ್ಲಿ ಸಚಿವರಾದ ಎಂ.ಬಿ.ಪಾಟೀಲ್, ಈಶ್ವರ ಖಂಡ್ರೆ ಸೇರಿ ಅನೇಕ ಸಚಿವರ ಉಪಸ್ಥಿತಿಯಲ್ಲಿ ಸಭೆ ನಡೆಸಿ ನಿರ್ಧರಿಸಲಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ಸಣ್ಣ ನೀರಾವರಿ ಸಚಿವ ಎನ್.ಎಸ್.ಬೋಸರಾಜು, ಶಾಸಕ ಬಸನಗೌಡ ದದ್ದಲ್, ಎಂಎಲ್ಸಿ ಎ.ವಸಂತಕುಮಾರ, ಶರಣಗೌಡ ಬಯ್ಯಪುರು, ಆರ್‌ಡಿಎ ಅಧ್ಯಕ್ಷ ರಾಜಶೇಖರ ರಾಮಸ್ವಾಮಿ, ಡಿಸಿ ನಿತೀಶ್ ಕೆ., ಜಿಪಂ ಸಿಇಓ ಈಶ್ವರ ಕುಮಾರ ಕಾಂದೂ, ಪಾಲಿಕೆ ಆಯುಕ್ತ ಜುಬಿನ್ ಮೊಹಾಪಾತ್ರ, ಎಸ್ಪಿ ಪುಟ್ಟಮಾದಯ್ಯ ಎಂ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net